ಭಾರತೀಯ ಕ್ರಿಕೆಟ್ ಧರ್ಮಕ್ಕೂ ಅಂಟಿಕೊಂಡ ಜಾತಿ ಮತ್ತು ಆಹಾರ ಪದ್ಧತಿ..!

1 min read
team india food saakshatv

ಭಾರತೀಯ ಕ್ರಿಕೆಟ್ ಧರ್ಮಕ್ಕೂ ಅಂಟಿಕೊಂಡ ಜಾತಿ ಮತ್ತು ಆಹಾರ ಪದ್ಧತಿ..!

team india food saakshatvಭಾರತೀಯ ಕ್ರಿಕೆಟ್ ನಲ್ಲಿ ಇಲ್ಲಿಯವರೆಗೆ ಜಾತಿ – ಧರ್ಮ, ಆಹಾರ ಪದ್ಧತಿಯ ಬಗ್ಗೆ ಯಾವುದೇ ರೀತಿಯ ಭಿನ್ನ ಅಭಿಪ್ರಾಯಗಳು ಇರಲಿಲ್ಲ.
ಆದ್ರೆ ಈಗ ಜಾತಿ, ಧರ್ಮ, ಆಹಾರ ಪದ್ಧತಿಗಳು ಸುದ್ದಿಯಾಗುತ್ತಿವೆ.
ಟಿ-20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಸೋತಾಗ ವೇಗಿ ಮಹಮ್ಮದ್ ಶಮಿ ವಿರುದ್ಧ ಜಾತಿಯ ಹೆಸರನ್ನು ತಂದಿಟ್ಟಿದ್ದರು. ಇದು ಮಾಸುವ ಮುನ್ನವೇ ಇದೀಗ ಬಿಸಿಸಿಐ ಹೊಸ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಹೌದು, ಟೀಮ್ ಇಂಡಿಯಾ ಹಲಾಲ್ ಕಟ್ ಮಾಂಸಹಾರವನ್ನು ನೀಡಬೇಕು ಎಂದು ಬಿಸಿಸಿಐ ಆದೇಶ ನೀಡಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.
ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳು ಕೂಡ ವ್ಯಕ್ತವಾಗಿವೆ.
ಟೀಮ್ ಇಂಡಿಯಾ ಆಟಗಾರರ ಊಟದ ಮೆನ್ ನಲ್ಲಿ ಹಲಾಲ್ ಕಟ್ ಮಾಂಸಹಾರ ಕಡ್ಡಾಯವಾಗಿದೆ. ಆದ್ರೆ ದನದ ಮಾಂಸ ಮತ್ತು ಹಂದಿ ಮಾಂಸವನ್ನು ನೀಡುವಂತಿಲ್ಲ ಎಂದು ಬಿಸಿಸಿಐ ಆದೇಶ ಹೊರಡಿಸಿದೆ.
team india food saakshatvಈ ಬಗ್ಗೆ ಬಿಜೆಪಿ ವಕ್ತಾರ ಮತ್ತು ಲಾಯರ್ ಗೌರವ್ ಗೋಯಲ್ ಅವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಈ ನಿಯಮವನ್ನು ತಕ್ಷಣವೇ ಹಿಂಪಡೆಯಬೇಕು. ಪ್ರತಿಯೊಬ್ಬರು ತಮಗೆ ಬೇಕಾಗಿರುವ ಆಹಾರವನ್ನು ತಿನ್ನುವ ಹಕ್ಕು ಇದೆ. ಹೀಗಾಗಿ ಕಡ್ಡಾಯವಾಗಿ ಇದೇ ರೀತಿಯ ಆಹಾರವನ್ನು ತಿನ್ನಬೇಕು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.
ಆದ್ರೆ ಬಿಸಿಸಿಐ ಈ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆಟಗಾರರ ಫಿಟ್ ನೆಸ್ ಮತ್ತು ಡಯಟ್ ಅನ್ನು ಆಧಾರವಾಗಿಟ್ಟುಕೊಂಡು ತಜ್ಞರು ಟೀಮ್ ಇಂಡಿಯಾ ಆಟಗಾರರ ಮೆನ್ ಸಿದ್ದಪಡಿಸಿದ್ದಾರೆ. ಇದು ನಿಜ ಕೂಡ. ಯಾಕಂದ್ರೆ, ಇತ್ತೀಚಿನ ದಿನಗಳಲ್ಲಿ ಆಟಗಾರರು ಫಿಟ್ ನೆಸ್ ಮತ್ತು ಡಯಟ್ ಗೆ ಹೆಚ್ಚಿನ ಆದ್ಯತೆ ನೀಡುತ್ತಿರುತ್ತಾರೆ. ಹೀಗಾಗಿ ಆಟಗಾರರ ಪದ್ಧತಿಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದ್ರೆ ಹಲಾಲ್ ಕಟ್ ಮಾಂಸಹಾರವನ್ನು ಕಡ್ಡಾಯವಾಗಿ ತಿನ್ನಬೇಕು ಎಂಬುದು ಯಾಕೆ ಎಂಬುದೇ ಗೊತ್ತಾಗುತ್ತಿಲ್ಲ.
ಇನ್ನೊಂದೆಡೆ ಟೀಮ್ ಇಂಡಿಯಾ ಆಟಗಾರರ ಜಾತಿಯನ್ನು ಮುಂದಿಟ್ಟುಕೊಂಡು ವಿವಾದಕ್ಕೆ ಉಪ್ಪು ಖಾರ ಹಾಕುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರರಲ್ಲಿ ಬಹುತೇಕರು ಬ್ರಾಹ್ಮಣರು ಇದ್ದಾರೆ ಎಂಬ ಮಾಹಿತಿಯನ್ನು ಬಿಚ್ಚಿಡುತ್ತಿದ್ದಾರೆ.
team india saakshatv bcciಆದ್ರೆ ಭಾರತದಲ್ಲಿ ಕ್ರಿಕೆಟ್ ಎಂಬುದು ಧರ್ಮವಾಗಿಬಿಟ್ಟಿದೆ. ಯಾವೊಬ್ಬ ಕ್ರಿಕೆಟ್ ಅಭಿಮಾನಿಯೂ ಕೂಡ ಜಾತಿಯನ್ನು ಮುಂದಿಟ್ಟುಕೊಂಡು ಅಭಿಮಾನವನ್ನು ಬೆಳೆಸಿಕೊಂಡಿಲ್ಲ. ಅದು ಸಚಿನ್ ಆಗಿರಬಹುದು, ವಿರಾಟ್ ಕೊಹ್ಲಿ ಆಗಿರಬಹುದು, ಮಹೇಂದ್ರ ಸಿಂಗ್ ಧೋನಿ ಆಗಿರಬಹುದು ಅಥವಾ ಮಹಮ್ಮದ್ ಅಜರುದ್ಧಿನ್. ಜಹೀರ್ ಖಾನ್ ಆಗಿರಬಹುದು ಎಲ್ಲರೂ ನಮ್ಮ ದೇಶದ ಕ್ರಿಕೆಟ್ ಆಟಗಾರರು ಎಂಬ ಅಭಿಮಾನದಿಂದ ಕ್ರಿಕೆಟ್ ಆಟಗಾರರನ್ನು ಆರಾಧಿಸುತ್ತಾರೆ.
ಒಟ್ಟಿನಲ್ಲಿ ಬಿಸಿಸಿಐ ಈಗ ಹೊಸ ವಿವಾದದಿಂದ ಗೊಂದಲವನ್ನು ಸೃಷ್ಠಿಸಿದೆ. ಆಹಾರಪದ್ಧತಿಯನ್ನು ಕಡ್ಡಾಯಗೊಳಿಸಿ ಆಟಗಾರರ ಜಾತಿಯನ್ನೇ ಪ್ರಶ್ನೆ ಮಾಡಿಕೊಂಡು ಟೀಕೆಕಾರರಿಗೆ ಆಹಾರವನ್ನು ಒದಗಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd