IPL ತಂಡಗಳಿಗೆ BCCI ಖಡಕ್ ಆದೇಶ
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೂ ಮುನ್ನವೇ ಲೀಗ್ ನಲ್ಲಿ ಪಾಲ್ಗೊಳ್ಳಲಿರುವ 10 ತಂಡಗಳಿಗೆ ಬಿಸಿಸಿಐ ಪ್ರಮುಖ ನಿರ್ದೇಶನಗಳನ್ನು ನೀಡಿದೆ.
ಈ ತಿಂಗಳ 8 ರಿಂದ ಎಲ್ಲಾ ತಂಡಗಳು ಮುಂಬೈ ತಲುಪಬೇಕು ಎಂದು ಸೂಚಿಸಿದೆ. ಸಹಾಯಕ ಸಿಬ್ಬಂದಿ, ಫ್ರಾಂಚೈಸಿ ಪ್ರತಿನಿಧಿಗಳು ಮತ್ತು ಲಭ್ಯವಿರುವ ಎಲ್ಲಾ ಆಟಗಾರರು ತಂಡಗಳೊಂದಿಗೆ ಮುಂಬೈಗೆ ಆಗಮಿಸಬೇಕು ಎಂದು ಬಿಸಿಸಿಐ ತಿಳಿಸಿದೆ.
ಭಾರತದಲ್ಲಿ ನೆಲೆಸಿರುವವರು ಮೂರು ದಿನ ಹಾಗೂ ವಿದೇಶದಿಂದ ಬರುವವರು ಐದು ದಿನ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಆದೇಶ ನೀಡಿದೆ.
ಮುಂಬೈಗೆ ಆಗಮಿಸುವ ಎರಡು ದಿನಗಳ ಮೊದಲು ತೆಗೆದುಕೊಂಡ ಆರ್‌ಟಿಪಿಸಿಆರ್ ವರದಿಯನ್ನು ಮಾತ್ರ ಪರಿಗಣಿಸುವುದಾಗಿ ಬಿಸಿಸಿಐ ಘೋಷಿಸಿದೆ.
ಆಯಾ ತಂಡಗಳು ಮಾರ್ಚ್ 14, 15 ರಿಂದ ಅಭ್ಯಾಸ ಅವಧಿಗಳನ್ನು ನಡೆಸಬಹುದು ಎಂದು ಫ್ರಾಂಚೈಸಿಗಳಿಗೆ ಸೂಚಿಸಲಾಗಿದೆ.
ಮಾರ್ಚ್ 26ರಿಂದ ಆರಂಭವಾಗಲಿರುವ ಐಪಿಎಲ್ 2022ರ ಋತುವಿನಲ್ಲಿ ಒಟ್ಟು 70 ಪಂದ್ಯಗಳನ್ನು ನಡೆಯಲಿವೆ.
55 ಪಂದ್ಯಗಳು ಮುಂಬೈನ ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂಗಳಲ್ಲಿ ನಡೆಯಲಿದ್ದು, ಉಳಿದ 15 ಪಂದ್ಯಗಳು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿವೆ.
bcci-instructs-ipl-teams-start-reaching-mumbai