BCCI | ಗಂಗೂಲಿ, ಜೈ ಶಾ ಅಲ್ಲ, ಬಿಸಿಸಿಐನ ಮುಂದಿನ ಬಿಗ್ ಬಾಸ್ ಯಾರು ?
ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿಗಳ ಅವಧಿ ಈ ತಿಂಗಳ 18ರಂದು ಮುಕ್ತಾಯವಾಗಲಿದ್ದು, ಆ ಜವಾಬ್ದಾರಿಗಳನ್ನು ಯಾರು ಹೊತ್ತಿಕೊಳ್ಳುತ್ತಾರೆ ಅನ್ನುವ ಪ್ರಶ್ನೆ ತುಂಬಾ ದಿನಗಳಿಂದ ಗಿರಗಿಟ್ಟಲೇ ಹೊಡೆಯುತ್ತಿದೆ.
ಬಹಳಷ್ಟು ಮಂದಿ ಪ್ರಸ್ತುತ ಕಾರ್ಯದರ್ಶಿ ಜೈ ಶಾ ಅವರೇ ಬಿಸಿಸಿಐನ ನೂತನ ಬಾಸ್ ಆಗುತ್ತಾರೆ, ಬಿಸಿಸಿಐ ಸಾರಥಿ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಭಾವಿಸಿದ್ದರು.
ಆದ್ರೆ ಬಿಸಿಐಐ ಅಧ್ಯಕ್ಷರ ರೇಸ್ ನಲ್ಲಿ ಹೊಸ ಹೆಸರು ಮುನ್ನಲೆಗೆ ಬಂದಿದೆ.
ಭಾರತ 1983 ವರ್ಲ್ಡ್ ಕಪ್ ಗೆದ್ದ ತಂಡದಲ್ಲಿ ಪ್ರಮುಖ ಭಾಗವಾಗಿದ್ದ ಮಾಜಿ ಆಲ್ ರೌಂಡರ್, ಭಾರತ ಮಾಜಿ ಸೆಲೆಕ್ಟರ್ ರೋಜರ್ ಬಿನ್ನಿ ಹೆಸರು ಬಿಸಿಸಿಐ ಡ್ರಾಪ್ಟ್ ಎಲಕ್ಟೋರಲ್ ರೋಲ್ಸ್ ನಲ್ಲಿ ಕಾಣಿಸಿಕೊಂಡಿದೆ.

ಜೊತೆಗೆ ಬಿನ್ನಿಗೆ ಕೇಂದ್ರದ ಬೆಂಬಲ ಕೂಡ ಇದೆ ಎಂದು ತಿಳಿದುಬಂದಿದೆ.
ಮತ್ತೊಂದು ಕಡೆ ಅಧ್ಯಕ್ಷ ಪದವಿ ರೇಸ್ ನಲ್ಲಿರುವ ಜೈ ಶಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಶೀರ್ವಾದ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಒಟ್ಟಾರೆ ಬಿಸಿಸಿಐ ಹೊಸ ಬಾಸ್ ಯಾರಾಗುತ್ತಾರೆ ಅನ್ನೋದು ಗೊತ್ತಾಗಬೇಕೆಂದರೇ ಅಕ್ಟೋಬರ್ 18 ವರೆಗೂ ಕಾದುನೋಡಬೇಕು.