T20 ಟೂರ್ನಿಗಳಲ್ಲಿ ಬದಲಿ ಆಟಗಾರ – ಹೊಸ ನಿಯಮ ಪರಿಚಯಿಸಿದ BCCI
ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್ ನಿಂದ ಸ್ಪೂರ್ತಿಗೊಂಡು ಬಿಸಿಸಿಐ T20 ಕ್ರಿಕೆಟ್ ನಲ್ಲಿ ಹೊಸದೊಂದು ನಿಯಮವನ್ನ ಪರಿಚಯಿಸಲು ಮುಂದಾಗಿದೆ. ಅಕ್ಟೋಬರ್ 11 ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿಯಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಎಂಬ ನಿಯಮಾವಳಿಯನ್ನು ಪರಿಚಯಿಸುತ್ತದೆ. ಇದು ಯಶಸ್ವಿಯಾದರೆ ಮುಂಬರುವ ಇಂಡಿಯನ್ ಪ್ರೀಮಿರ್ ಲೀಗ್ ನಲ್ಲೂ ಜಾರಿಗೆ ಬರಲಿದೆ.
ನಿಯಮದ ಪ್ರಕಾರ, ಮ್ಯಾಚ್ ನಡೆಯುವ ಸಮಯದಲ್ಲಿ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್ ನ ಒಬ್ಬ ಸದಸ್ಯರನ್ನ ಉಪಯುಕ್ತವೆಂದು ಭಾವಿಸಿದರೆ ಬದಲಾಯಿಸಬಹುದು, ತಂಡಗಳು ಮತ್ತು ಆಟಗಾರರು ಹೊಸ ನಿಯಮಕ್ಕೆ ಒಗ್ಗಿಕೊಳ್ಳಲು, ಮಂಡಳಿಯು ರಾಜ್ಯ ಕ್ರಿಕೆಟ್‌ನಲ್ಲಿ ಇದನ್ನು ಮೊದಲು ಜಾರಿಗೆ ತರಲು ಪ್ರಯತ್ನಿಸುತ್ತದೆ.
ರಾಜ್ಯ ಕ್ರಿಕೆಟ್ ಸೋಸಿಯೇಟ್ಸ್ ಗಳಿಗೆ ಬಿಸಿಸಿಐ ಕಳಿಸಿರುವ ಸುತ್ತೋಲೆಯ ಪ್ರಕಾರ “ ಟಿ 20 ಕ್ರಿಕೆಟ್‌ನ ನಿರಂತರ ಜನಪ್ರಿಯತೆ ಮತ್ತು ಸ್ವರೂಪವನ್ನ ಹೆಚ್ಚು ಆಕರ್ಷಿಸುವ ಸಲುವಾಗಿ ಹೊಸ ಆಯಾಮಗಳನ್ನ ಪರಿಚಯಿಸುವುದ ಅತ್ಯಗತ್ಯವಾಗಿದೆ. ಇದು ವೀಕ್ಷಕರಿಗೆ ಮಾತ್ರವಲ್ಲದೆ ಕಾರ್ಯತಂತ್ರದ ದೃಷ್ಟಿಕೋನದಿಂದ ಭಾಗವಹಿಸುವ ತಂಡಗಳಿಗೂ ಆಸಕ್ತಿದಾಯಕವಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ಪರಿಕಲ್ಪನೆಯು ಪ್ರತಿ ತಂಡಕ್ಕೆ ಒಬ್ಬ ಬದಲಿ ಆಟಗಾರನು ಪಂದ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಆಟಕ್ಕೆ ಹೊಸ ಕಾರ್ಯತಂತ್ರದ ಆಯಾಮವನ್ನು ಕೊಡುತ್ತದೆ.
“ಟಾಸ್ ಸಮಯದಲ್ಲಿ ತಂಡಗಳು ಪ್ಲೇಯಿಂಗ್ ಇಲೆವೆನ್ ಮತ್ತು 4 ಬದಲಿ ಆಟಗಾರರನ್ನು ಗುರುತಿಸಬೇಕು. ಟೀಮ್ ಶೀಟ್‌ನಲ್ಲಿ ಹೆಸರಿಸಲಾದ 4 ಬದಲಿ ಆಟಗಾರರ ಪೈಕಿ ಒಬ್ಬ ಆಟಗಾರನನ್ನು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು ಎಂದು ಬಿಸಿಸಿಐ ಸುತ್ತೋಲೆಯಲ್ಲಿ ತಿಳಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸುವುದು ಕಡ್ಡಾಯವಲ್ಲ ಇದರ ನಿರ್ಧಾರ ತಂಡಗಳಿಗೆ ಬಿಟ್ಟದ್ದು. ಈ ನಿಯಮವನ್ನ ಈಗಾಗಲೇ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಎಕ್ಸ್ ಫ್ಯಾಕ್ಟರ್ ಅಡಿಯಲ್ಲಿ ಪರಿಚಯಸಲಾಗಿದೆ.