ಚಾಮರಾಜನಗರ : ಪ್ರತಿನಿತ್ಯ ಸಾವಿರಾರು ಜನರ ಕೆಲಸ ಕಾರ್ಯಗಳಿಗೆ ತಾಲೂಕು ಕಛೇರಿಗೆ ಆಗಮಿಸುತ್ತಾರೆ ಸಾರ್ವಜನಿಕ ತಮ್ಮ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಾಗುತ್ತಿದ್ದ ಬಂದ್ ಮಾಡಿ ಕಲ್ಲು ಕಂಬ ಹಾಕಿ ಗಾರ್ಡನ್ ಮಾಡಲು ಮುಂದಾಗಿದ್ದಾರೆ.
ಸರ್ಕಾರಿ ಕಚೇರಿಗಳು ಎಂದರೆ ಯಾವುದೇ ಆಕರ್ಷಣೆಯಿಲ್ಲದ ಸಂದರ್ಭದಲ್ಲಿ ತಹಸೀಲ್ದಾರ್ ನಂಜುಂಡಯ್ಯ ಪ್ರತಿ ದಿನವೂ ತಮ್ಮ ಕೆಲಸಕಾರ್ಯಗಳಿಗೆ ಸಾವಿರಾರು ಜನರು ಆಗಮಿಸುವ ತಾಲೂಕು ಕಚೇರಿಯ ಪ್ರವೇಶದಲ್ಲಿ ಆಕರ್ಷಕ ಗಾರ್ಡನ್ ನಿರ್ಮಾಣ ಮಾಡಲು ಹೊರಟ್ಟಿದ್ದಾರೆ.
ತಾಲೂಕು ಕಚೇರಿಯ ಆವರಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಲು ಕ್ರಮ ಕೈಗೊಂಡಿದ್ದಾರೆ.
ಕಚೇರಿಯ ಹಿಂಭಾಗದ ಖಾಲಿ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕಚೇರಿಯ ಮುಂಭಾಗದಲ್ಲಿ ಗಾರ್ಡನ್ ಮಾಡುವ ಸಲುವಾಗಿ ಕಲ್ಲು ಕಂಬ ನೆಟ್ಟು ತಂತಿಬೇಲಿ ಅಳವಡಿಸಿದ ಸಿಬ್ಬಂದಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿದರು.
ಕಳೆದ ಒಂದೂವರೆ ವರ್ಷದ ಹಿಂದೆ ತಾಲೂಕಿನ ತಹಸೀಲ್ದಾರ್ ಆಗಿ ಎಮ್ .ನಂಜುಂಡಯ್ಯ ನಿಯೋಜನೆಯಾದ ನಂತರ ತಮ್ಮ ನಿವಾಸದ ಸುತ್ತಲೂ ನೆರಳು ನೀಡುವ ಸಸಿಗಳು ಹಾಗೂ ಹೂಗಿಡಗಳನ್ನು ನೆಟ್ಟು ತಮ್ಮ ಪರಿಸರ ಮೆರೆದರು.
ಹಿಂದೆ ಕರ್ತವ್ಯ ನಿರ್ವಹಿಸುತ್ತಿದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೂ ತೋಟ ನಿರ್ಮಾಣ ಮಾಡಿರುವುದು ಕಾಣಬಹುದಾಗಿದೆ.
ತಾಲೂಕು ಕಚೇರಿಯ ಒಳಭಾಗದಲ್ಲಿಯೂ ವಿವಿಧ ರೀತಿಯ ಹೂವಿನ ಗಿಡಗಳನ್ನು ನೆಟ್ಟು , ಪರಿಣಾಮ ಆಕರ್ಷಕ ಉದ್ಯಾನ ಕಣ್ಮನ ಸೆಳೆಯುವಂತಾಗಿದೆ.
ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪದ ನರ್ಸರಿಯಿಂದ ಸ್ವತ ಹಣ ನೀಡಿ ವಿವಿಧ ರೀತಿಯ ಹೂಗಿಡಗಳನ್ನು ಕಚೇರಿಯ ಎದುರು ತಾವೇ ಗುದ್ದಲಿ ಹಿಡಿದು ಗಿಡಗಳು ನೆಡುವ ಮೂಲಕ ಉದ್ಯಾನ ನಿರ್ಮಣಕ್ಕೆ ತಹಸೀಲ್ದಾರ್ ನಂಜುಂಡಯ್ಯ ಮುಂದಾಗಿದ್ದಾರೆ.
ಸಮೀಪದಲ್ಲಿ ಹಾದುಹೋಗಿರುವ ಪೈಪ್ ಲೈನಿನಿಂದ ಸಸಿಗಳಿಗೆ ನೀರು ಒದಗಿಸಲಾಗುವುದು. ವರ್ಷಪೂರ್ತಿ ಹಸಿರು ಹಾಗೂ ವಿವಿಧ ವರ್ಣದ ಹೂವುಗಳು ಅರಳುವುದರಿಂದ ಕಚೇರಿಯ ಅಂದವೂ ಹೆಚ್ಚುವುದಲ್ಲದೆ ಸಾರ್ವಜನಿಕರಿಗೆ ಉದ್ಯಾನದ ಸೊಬಗು ಸವಿಯುವಂತೆ ಮಾಡಲಾಗುತ್ತಿದೆ.
ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದ ವಾಹನಗಳನ್ನು ಪ್ರತ್ಯೇಕವಾಗಿ ಗುರ್ತಿಸಿದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಂತೆ ಮಾಡಲಾಗಿದೆ .








