ಐಸಿಸಿ ಏಕದಿನ ವಿಶ್ವಕಪ್-2023 ಆರಂಭಕ್ಕೂ ಮುನ್ನ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಆಜ಼ಂ, ನಂ.1 ಸ್ಥಾನದೊಂದಿಗೆ ಮಹತ್ವದ ಪಂದ್ಯಾವಳಿಗೆ ಕಾಲಿಡುತ್ತಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಸರ್ವಶ್ರೇಷ್ಠ ಫಾರ್ಮ್‌ನಲ್ಲಿರುವ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜ಼ಂ, ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರ ಪ್ರಬಲ ಪೈಪೋಟಿಯ ನಡುವೆಯೂ ಬಾಬರ್, ಅಗ್ರಸ್ಥಾನವನ್ನ ಉಳಿಸಿಕೊಂಡಿದ್ದಾರೆ. ಹೀಗಾಗಿ ಇದೇ ಆತ್ಮವಿಶ್ವಾಸದೊಂದಿಗೆ 2023ರ ಏಕದಿನ ವಿಶ್ವಕಪ್ ಆಡಲಿದ್ದಾರೆ.
ಇನ್ನೂ ಹಿಂದೆ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಬ್ಯಾಟರ್ ಆಗಿದ್ದರು. ಈ ವಿಶ್ವಕಪ್‌ನಲ್ಲಿ ಕಿಂಗ್ ಕೊಹ್ಲಿ, 9ನೇ ರ‍್ಯಾಂಕಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು, ವಿಶ್ವದ ಶ್ರೇಷ್ಠ ಬ್ಯಾಟರ್ ಆಗಿದ್ದಾರೆ.
ಆಸೀಸ್ ಬ್ಯಾಟರ್‌ಗಳ ಪ್ರಾಬಲ್ಯ:
ಉಳಿದಂತೆ 1999 ರಿಂದ 2007ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ನಂ.1 ಸ್ಥಾನದಲ್ಲಿ ಮಿಂಚಿದ್ದರು. 2007ರ ಏಕದಿನ ವಿಶ್ವಕಪ್ ವೇಳೆ ಮೈಕ್ ಹಸ್ಸಿ, 2003ರಲ್ಲಿ ಮ್ಯಾಥ್ಯೂ ಹೇಡನ್ ಹಾಗೂ 1999ರ ಏಕದಿನ ವಿಶ್ವಕಪ್‌ನಲ್ಲಿ ಮೈಕಲ್ ಬೆವನ್ ಅವರುಗಳು ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದರು.