Belagavi : ಮಳೆಯಿಂದಾಗಿ 317 ಮನೆಗಳಿಗೆ ಹಾನಿ
ಬೆಳಗಾವಿ : ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈವರೆಗೂ 317 ಮನೆಗಳಿಗೆ ಹಾನಿಯಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಅತಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಚಿಕ್ಕೋಡಿಯಲ್ಲಿ 82, ಕಿತ್ತೂರಿನಲ್ಲಿ39, ರಾಮದುರ್ಗ 43, ಸವದತ್ತಿ 35, ಬೆಳಗಾವಿ 19
ಮೂಡಲಗಿ 22, ಕಾಗವಾಡ 24 ,ಬೈಲಹೊಂಗಲ 19 ,ಹುಕ್ಕೇರಿ 16 ಮನೆಗಳು ಮಳೆಯಿಂದಾಗಿ ಹಾನಿಗೆ ಒಳಗಾಗಿವೆ.
ಬಿಟ್ಟು ಬಿಡದೇ ಸುರಿದ ಮಳೆಯಿಂದಯಾಗಿ ಮನೆಗಳ ಗೋಡೆ ಕುಸಿಯುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗುತ್ತಿವೆ. ಆದ್ರೆ ಈವರೆಗೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬೆಳಗಾವಿಯಲ್ಲಿ ಕಳೆದ 9 ದಿನಗಳಿಂದ ಎಡಬಿಡದೇ ಮಳೆಯಾಗುತ್ತಿದ್ದು, ಜಿಲ್ಲೆಯ ಸಪ್ತ ನದಿಗಳು ಮೈದುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 85 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನ ಹಿಪ್ಪರಗಿ ಬ್ಯಾರೇಜ್ ನಿಂದ ಹೊರ ಬಿಡಲಾಗುತ್ತಿದೆ.
ಇತ್ತ ಘಟಪ್ರಭಾ ನದಿಗೆ 27 ಸಾವಿರ ಕ್ಯೂಸೆಕ್, ಮಲಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರ ಆಗಲೀ, ಬೆಳಗಾವಿ ಜಿಲ್ಲೆ ಜಲಾಶಯಗಳು ಇನ್ನೂ ಅರ್ಧದಷ್ಟು ಭರ್ತಿ ಆಗಿಲ್ಲ.

ಹೀಗಾಗಿ ಯಾವುದೇ ಜಲಾಶಯದಿಂದ ನೀರು ನದಿಗೆ ಬಿಡುತ್ತಿಲ್ಲ
ನೀರು ಹರಿಬಿಡುತ್ತಿರುವ ಕಾರಣ ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ ಆರು ಕೆಳ ಹಂತದ ಸೇತುವೆ ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.
ಹೀಗಾಗಿ ಸ್ಥಳಕ್ಕೆ ಬೆಳಗಾವಿ ಡಿಸಿ ನಿತೇಶ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.