ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರನ್ನ ಭೇಟಿಯಾದ MES ಪುಂಡರು…
ನಾಡದ್ರೋಹಿ MES ಪುಂಡರು ಬೆಳಗಾವಿಯಲ್ಲಿ ಮತ್ತೆ ಉದ್ದಟತನವನ್ನ ಮೆರೆದಿದ್ದಾರೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ಭೇಟಿಯಾಗಿರುವ ಎಂಇಎಸ್ ಪುಂಡರು ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಸುಳ್ಳು ದೂರು ನೀಡಿದ್ದಾರೆ.
ಬೆಳಗಾವಿ ನಗರದಿಂದ 15 ಕಿಮೀ ಅಂತರದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಶಿನೋಳಿ ಗ್ರಾಮಕ್ಕೆ ಗ್ರಾ.ಪಂ.ಚುನಾವಣೆ ಪ್ರಚಾರ ನಿಮಿತ್ತ ಶಿನೋಳಿಗೆ ಬಂದಿದ್ದ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಅವರನ್ನ ನಾಡದ್ರೋಹಿ ಎಂ ಇ ಎಸ್ ಪುಂಡರು ಭೇಟಿ ಮಾಡಿ ಕರ್ನಾಟಕ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ್ದಾರೆ.
‘ಮರಾಠಿಗರಿಗೆ ಅನ್ಯಾಯ ಮಾಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ’ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕುಬೆಳಗಾವಿ ನಮ್ಮ ಹಕ್ಕದ್ದು, ಕರ್ನಾಟಕದಲ್ಲಿ ಇರಲ್ಲ ಎಂದು ಘೋಷಣೆ ಕೂಗಿದ್ದಾರೆ.
ಬೆಳಗಾವಿಯಿಂದ ಶಿನೋಳಿಗೆ ತೆರಳಿದ್ದ 10 ಕ್ಕೂ ಅಧಿಕ ಎಂಇಎಸ್ ಮುಖಂಡರು ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡ್ತಿದೆ, ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ಪತ್ರ ನೀಡುತ್ತಿಲ್ಲ ಎಂದು ಪುಂಡರು ದೂರು ನೀಡಿದ್ದು, ಎಂಇಎಸ್ ಪುಂಡರ ಮನವಿ ಸ್ಚೀಕರಿಸಿದ ಬಳಿಕ ಸಚಿವ ಶಂಭುರಾಜ ದೇಸಾಯಿ ಹೇಳಿಕೆ ನೀಡಿದ್ದಾರೆ.
Belagavi Breaking: MES thugs meet Maharashtra border in-charge minister…