ಪ್ರಿಯಕರನ ಜೊತೆ ಸೇರಿ ತಂದೆಯ ಕೊಲೆ ಮಾಡಿದ ಮಗಳು – ಕೃತ್ಯಕ್ಕೆ ತಾಯಿ ಸಾಥ್
ಬೆಳಗಾವಿ ನಗರದ ರಿಯಲ್ ಎಸ್ಟೇಟ ಉದ್ಯಮಿ ಕೊಲೆ ಪ್ರಕರಣವನ್ನ ಪೊಲೀಸರು ಭೇದಿಸಿದ್ದು, ಪ್ರಿಯಕರನ ಜೊತೆ ಸೇರಿ ಪುತ್ರಿಯೇ ತನ್ನ ತಂದೆಯನ್ನ ಕೊಂದಿರುವುದು ತನಿಖೆಯುಲ್ಲಿ ಬಯಲಾಗಿದೆ. ಈ ಕೆಲಸಕ್ಕೆಸ್ವತಃ ತಾಯಿಯೇ ಸಾಥ್ ನೀಡಿದ್ದಾಳೆ.
ನಗರದ ಕ್ಯಾಂಪ್ ಪ್ರದೇಶದಲ್ಲಿ ಸೆ.17 ರಂದು ರಿಯಲ್ ಎಸ್ಟೇಟ್ ಉದ್ಯಮಿ ಸುಧೀರ್ ಕಾಂಬಳೆ(57) ಎಂಬುವವರ ಹತ್ಯೆಯಾಗಿತ್ತು. ಹತ್ಯೆ ಪ್ರಕರಣದ ಸಂಬಂಧ ಕೊಲೆಯಾದವನ ಹೆಂಡತಿ ರೋಹಿಣಿ ಕಾಂಬಳೆ, ಆತನ ಮಗಳು ಸ್ನೇಹಾ ಕಾಂಬಳೆ ಹಾಗೂ ಸ್ನೇಹಾಳ ಪ್ರಿಯಕರ ಮಹಾರಾಷ್ಟ್ರದ ಪುಣಾ ಮೂಲದ ಅಕ್ಷಯ ವಿಠ್ಠಕರ್ (25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬೆಳಗಾವಿ ಮೂಲದವರಾಗಿರುವ ಸುಧೀರ್ ಕಾಂಬಳೆ (57) ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಕರೋನಾ ನಂತರದಿಂದ ಬೆಳಗಾವಿಗೆ ಬಂದು ನೆಲೆಸಿದ್ದರು. ಸುದೀರ್ ಮರಳಿ ಬಂದಾಗಿನಿಂದ ಹೆಂಡತಿ ಮತ್ತು ಮಗಳ ಮೇಲೆ ಅನುಮಾನ ಪಡುತ್ತಿದ್ದನಂತೆ, ಜೊತೆಗೆ ತಾಯಿಗೆ ನಿತ್ಯವೂ ಕಿರುಕುಳ ಕೊಡುತ್ತಿದ್ದನಂತೆ ಇದರಿಂದಾಗಿ ಅಪ್ಪನನ್ನ ಮುಗಿಸಬೇಕು ಎಂದು ಮಗಳು ಪ್ರಿಯಕರನ ಜೊತೆ ಸೇರಿ ಪ್ಲಾನ್ ಮಾಡಿದ್ದಾರೆ. ಇದಕ್ಕೆ ತಾಯಿಯೂ ಸಾಥ ಕೊಟ್ಟಿದ್ದಾರೆ.
ಕೊಲೆ ಮಾಡಿದ ಮೇಲೆ ತಪ್ಪಿಸಿಕೊಳ್ಳುವುದು ಹೇಗೆ ಎಂದು ಕಲಿಯಲು 10 ಭಾರಿ ದೃಶ್ಯಂ ಮೂವಿ ನೋಡಿದ್ದರಂತೆ. ಬೆಳಗಾವಿ ಕ್ಯಾಂಪ್ ಪೊಲೀಸರು ಡಿಸಿಪಿ ರವೀಂದ್ರ ಗಡಾದಿ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.
Belagavi: Daughter killed father along with lover – mother accomplices in the act








