Belgaum | ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 70 ಲಕ್ಷ ಸಂಗ್ರಹ
ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 70 ಲಕ್ಷ ಸಂಗ್ರಹವಾಗಿದೆ.
ಈ ಬಗ್ಗೆ ದೇವಸ್ಥಾನದ ಅಧೀಕ್ಷಕ ಅರವಿಂದ್ ಯಾಳಗಿ ಮಾಹಿತಿ ನೀಡಿದ್ದಾರೆ.
ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ನಗದು ಹಣ, ಚಿನ್ನಾಭರಣ ಎಣಿಕೆ ಕಾರ್ಯ ನಡೆದಿದೆ.

ಐದು ದಿನಗಳಿಂದ ನಡೆದಿದ್ದ ಎಣಿಕೆ ಕಾರ್ಯದಲ್ಲಿ ಒಟ್ಟು 65.70 ಲಕ್ಷ ರೂ.ನಗದು, 4.13ಲಕ್ಷ ಮೌಲ್ಯದ ಚಿನ್ನಾಭರಣ, 1.14 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿದೆ.
ಒಟ್ಟಾರೆ ಯಲ್ಲಮ್ಮನ ಹುಂಡಿಯಲ್ಲಿ 70 ಲಕ್ಷ ರೂ.ಸಂಗ್ರಹವಾಗಿದೆ.
ಐದು ದಿನಗಳ ಎಣಿಕೆ ಕಾರ್ಯದಲ್ಲಿ ವಿದೇಶ ಕರೆನ್ಸಿ, ಚಿತ್ರವಿಚಿತ್ರ ಭಕ್ತರ ಪತ್ರಗಳು ಪತ್ತೆಯಾಗಿವೆ. Belgaum 70 lakhs collected in the hundi of Savadatti Yallamma Devi