Belgaum | ನದಿತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ
ಬೆಳಗಾವಿ : ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಕಾಗವಾಡ ಮತ್ತು ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೆ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಮಳೆಯ ಪ್ರಮಾಣ ಹೀಗೆಯೇ ಮುಂದುವರೆದರೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ.
ಕೃಷ್ಣಾ ನದಿಗೆ ಅಡ್ಡಲಾಗಿರುವ ಎಂಟು ಕೆಳಹಂತದ ಸೇತುವೆಗಳು ಮುಳಗಡೆಯಾಗಿದ್ದು ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಅಲ್ಲದೆ ಈಗಾಗಲೇ ಗ್ರಾಮೀಣ ಭಾಗದಲ್ಲಿ ಹಲವೆಡೆ ಬ್ಯಾರಿಗೆಡ್ ಅಳವಡಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
2019 ರ ಪ್ರವಾಹ ಸಂದರ್ಭದಲ್ಲಿ ತಾಂತ್ರಿಕ ತೊಂದರೆಯಿಂದ ಪರಿಹಾರದ ಬಾರದ ಕುಟುಂಬಗಳಿಗೆ ತಾಂತ್ರಿಕ ತೊಂದರೆಯನ್ನು ಸರಿಪಡಿಸಲಾಗಿದ್ದು ಶೀಘ್ರವಾಗಿ ಅವರಿಗೂ ಪರಿಹಾರ ದೊರಕಲಿದೆ ಎಂದು ಮಾಹಿತಿ ನೀಡಿದರು.
ಒಂದು ಕೋಟಿ ನಲವತ್ತೆಂಟು ಲಕ್ಷ ರೂಪಾಯಿ ಸಂತ್ರಸ್ಥರ ಖಾತೆಗಳಿಗೆ ಜಮೆಯಾಗಲಿದೆ. ದೂದಗಂಗಾ, ವೇದಗಂಗಾ ನದಿಗಳು ಸೇರಿದಂತೆ ಜಿಲ್ಲೆಯ ಸಪ್ತ ನದಿಗಳಲ್ಲಿ ಸದ್ಯ ಅಪಾಯಮಟ್ಟದಲ್ಲಿ ನೀರು ಹರಿಯುತ್ತಿದ್ದು ಜನರು ನದಿ ತೀರದತ್ತ ತೆರಳದಂತೆ ಸೂಚಿಸಲಾಗಿದೆ ಎಂದರು.