Belgaum | ದುರ್ಗಾಮಾತಾ ದೌಡ್ ನಲ್ಲಿ ತಲ್ವಾರ್ ಹಿಡಿದು ಕುಣಿದ ಯುವಕರು
ಚಿಕ್ಕೋಡಿ : ದುರ್ಗಾಮಾತಾ ದೌಡ ಮೆರವಣಿಗೆಯಲ್ಲಿ ಯುವಕರು ತಲ್ವಾರ್ ಹಿಡಿದು ಕುಣಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹಿಂದೂಪರ ಸಂಘಟನೆವತಿಯಿಂದ ದುರ್ಗಾಮಾತಾ ದೌಡ್ ಆಯೋಜಿಸಲಾಗಿತ್ತು.
ಈ ವೇಳೆ ಯುವಕರು ಡಿಜೆ ಸಾಂಗ್ ಹಾಕಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯುವಕರು ತಲ್ವಾರ್ ಹಿಡಿದು ಕುಣಿದಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದಕ್ನೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.