ಬೆಳಗಾವಿ | ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಸಾವು Belgaum saaksha tv
ಬೆಳಗಾವಿ : ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಮೀಪದಲ್ಲಿರುವ ಬರ್ಡೆ ಧಾಭಾ ಬಳಿ ನಡೆದಿದೆ.
ಬೆಳಗಾವಿಯ ಚವ್ಹಾಟ ಗಲ್ಲಿಯ ಯುವಕ ಶ್ರೀನಾಥ್ ಡಿ.ಪವಾರ, ಸದಾಶಿವ ನಗರದ ಯುವಕ ರುಚಿತ ಆರ್.ಧುಮಾವತ ದುರ್ದೈವಿಗಳಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಿನ್ನೆ ರಾತ್ರಿ ಬರ್ಡೆ ಧಾಭಾ ಬಳಿ, ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
