ಬೆಲ್ಜಿಯಂ ಯುವತಿಯ ಜೊತೆಗೆ ಹಂಪಿಯ ಆಟೋ ಚಾಲಕನ ಮದುವೆ….
ವಿಶ್ವ ವಿಖ್ಯಾತ ಹಂಪಿಯ ಪ್ರವಾಸಕ್ಕೆ ಬಂದ ಬೆಲ್ಜಿಯಂ ಯುವತಿಯೊಬ್ಬಳು ಹಂಪಿಯ ಆಟೋ ಚಾಲಕ ಮತ್ತು ಗೈಡ್ ಆಗಿರುವ ಯುವಕನಿಗೆ ಮನಸೋತು ಮದುವೆಯಾಗಲು ನಿರ್ಧರಿಸಿದಿದ್ದಾಳೆ. ಹಿಂದೂ ಸಂಪ್ರದಾಯದಂತೆ ಇಂದು ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಮೂರು ವರ್ಷದ ಹಿಂದೆಯೇ ಹಂಪಿಯ ಪ್ರವಾಸ ಕೈಗೊಂಡಿದ್ದ ಬೆಲ್ಜಿಯಂ ದೇಶದ ಕುಟುಂಬದ ನಡುವೆ ಆಟೋಚಾಲಕ ಮತ್ತು ಮಾರ್ಗದರ್ಶಕ ವಿ ಅನಂತರಾಜು ನಡುವೆ ಪರಿಚಯವಾಗಿದೆ.
ತಂದೆ ಮರಿಯನ್ನೇ ಶ್ರೀಮತಿ ಜೀಮ್ ಫಿಲಿಪ್ಪೆ ಅವರ ಜೊತೆಗೆ ಪ್ರವಾಸ ಕೈಗೊಂಡಿದ್ದ ಅವರ ತೃತೀಯ ಸುಪುತ್ರಿ ಕೆಮಿಲ್ ಹಾಗೂ ಹಂಪಿಯ ಆಟೋಚಾಲಕ/ ಮಾರ್ಗದರ್ಶಕ ಅನಂತರಾಜುವಿನ ನಡುವೆ ಪ್ರೇಮಾಂಕುರವಾಗಿದೆ, ಈ ಯುವ ಜೋಡಿಗಳ ಪ್ರೇಮ ವಿವಾಹಕ್ಕೆ ಎರಡೂ ಕುಟುಂಬದ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಹಂಪಿಯ ಶಿವರಾಮ ಅವದೂತರ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ 50ಕ್ಕೂ ಹೆಚ್ಚು ಬೆಲ್ಜಿಯಂ ದೇಶದ ಸಂಭಂದಿಗಳು ಮತ್ತು ಹಂಪಿಯ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಷಿತಾರ್ಥ ನೆರವೇರಿತು.
ಇಂದು ಬೆಳಗ್ಗೆ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಈ ನವ ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಮೂರು ವರ್ಷಗಳ ಹಿಂದೆಯೇ ಪ್ರೀತಿಸಿದ್ದರೂ ಕೊರೊನಾ ಕಾರಣದಿಂದ ಮದುವೆ ತಡವಾಗಿತ್ತು.
Belgium girl: Marriage of Hampi auto driver with Belgian girl….