Bellary | ರಕ್ಷಣೆಗೆ ತೆರಳಿದ್ದಾಗ ಬೋಟ್ ಪಲ್ಟಿ
ಬಳ್ಳಾರಿ : ಸಿರುಗುಪ್ಪ ತಾಲೂಕಿನ ಮುದೇನೂರು ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 8 ಜನರನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಯ ಬೋಟ್ ಮಗುಚಿ ಬಿದ್ದಿದೆ.
ಸಿರುಗುಪ್ಪ ತಾಲೂಕಿನ ಮುದೇನೂರು ಗ್ರಾಮದ ಶನೀಶ್ವರ ದೇವಸ್ಥಾನ ಮುಳುಗಡೆ ಆಗಿತ್ತು.
ವೇದಾವತಿ ನದಿಯ ಬಳಿ ಈ ದೇವಸ್ಥಾನವಿದೆ.ದೇವಸ್ಥಾನದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದರು.ಈ ವೇಳೆ ಬೋಟ್ ಪಲ್ಟಿಯಾಗಿದೆ.

ಬೋಟ್ ಪಲ್ಟಿಯಾದರೂ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿ ದೇವಸ್ಥಾನ ಬಳಿ ಸೇರಿದ್ದಾರೆ.
ಕ್ಷಣಕ್ಷಣಕ್ಕೂ ವೇದಾವತಿ ನದಿಯ ನೀರು ಹೆಚ್ಚಾಗುತ್ತಿದೆ.ಬೆಳಿಗ್ಗೆ ದೇವಸ್ಥಾನಕ್ಕೆ ಪೂಜಾರಿ ಹಾಗೂ ಭಕ್ತರು ಪೂಜೆಗೆ ತೆರಳಿದ್ದರು.
2009 ರಲ್ಲಿ ಇದೇ ರೀತಿ ದೇವಸ್ಥಾನದಲ್ಲಿ ಸಿಲುಕಿಕೊಂಡದ್ದನ್ನು ನೆನೆಯಬಹುದು. ಆಗ ಏರ್ ಲಿಫ್ಟ್ ಮೂಲಕ ಜನರನ್ನು ರಕ್ಷಣೆ ಮಾಡಲಾಗಿತ್ತು. ನೀರಿನ ಸೆಳೆತ ಹೆಚ್ಚಳ ಹಿನ್ನಲೆಯಲ್ಲಿ ಬೋಟ್ ಮೂಲಕ ರಕ್ಷಣೆ ಕಷ್ಟ ಎಂದು ಹೇಳಲಾಗುತ್ತಿದೆ .