ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಸೊಂಕಿತರ ಸಂಖ್ಯೆ 22 ಸಾವಿರದ ಗಡಿದಾಟಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 413 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 22223ಕ್ಕೇರಿದೆ. ಇಂದು 5 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 269 ಕ್ಕೇರಿದೆ.
ಇನ್ನೂ ಗುಣಮುಖರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ಇಂದು ಒಂದೇ ದಿನ 470 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರ ಸಂಖ್ಯೆ 17203ಕ್ಕೆ ಏರಿಕೆಯಾಗಿದೆ. ಈಗಲೂ ಜಿಲ್ಲೆಯಲ್ಲಿ 4751 ಸಕ್ರೀಯ ಪ್ರಕರಣಗಳಿವೆ.