Bengalore | ಜಮೀನಿಗಾಗಿ ತಂದೆಯನ್ನ ಕೊಂದ ಮಗ
ಬೆಂಗಳೂರು : 21 ಗುಂಟೆ ಜಮೀನಿಗಾಗಿ ಸ್ವಂತ ತಂದೆಯನ್ನು ಮಗನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ. bengalore-man-killed-son bannerugatta ಕೊರಟಗೆರೆ ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ.
ಚನ್ನಿಗರಾಯಪ್ಪ ಎರಡು ಮದುವೆಯಾಗಿದ್ದ. ಹೀಗಾಗಿ ಇಬ್ಬರು ಹೆಂಡತಿಯರ ಮಧ್ಯೆ 21 ಗುಂಡೆ ಜಮೀನಿಗಾಗಿ ಆಗಾಗ ಜಗಳವಾಗುತ್ತಲೇ ಇತ್ತು. ಈ ಗಲಾಟೆ ಮಧ್ಯೆ ಬಂದ ಪತಿ ಚನ್ನಿಗರಾಯಪ್ಪನನ್ನು ಪತ್ನಿ ಯಶೋಧ , ಮಗ ನಿಖಿಲ್ ಕಿಡ್ನಾಪ್ ಮಾಡಿ ಇರಿದು ಕೊಲೆ ಮಾಡಿದ್ದಾರೆ.
ಹತ್ಯೆಯ ಬಳಿಕ ಯಾರೂ ಕೂಡ ಗುರುತು ಪತ್ತೆ ಮಾಡಬಾರದೆಂದು ಚನ್ನಿಗರಾಮಪ್ಪ ಅವರ ಮೃತದೇಹಕ್ಕೆ ಬೆಂಕಿ ಹಾಕಿ ಸುಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು, ಚನ್ನಿಗರಾಯಪ್ಪ ಪತ್ನಿ ಯಶೋಧ , ಮಗ ನಿಖಿಲ್, ಮಂಜುನಾಥ್, ವಿಶ್ವಾಸ್ ಬಂಧಿಸಿದ್ದಾರೆ.










