Bengaluru : ಡಿ 29 ರಂದು ಆಟೋ ಸೇವೆ ಬಂದ್ : ಮುಷ್ಕರಕ್ಕೆ ಕರೆ ಕೊಟ್ಟ ಆಟೋ ಚಾಲಕರು
ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಆಟೋ ಚಾಲಕರು ಡಿ 29 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಡಿ 29 ರಂದು ಬೆಂಗಳೂರು ನಗರದಲ್ಲಿ ಆಟೋ ಸಂಚಾರ್ ಬಂದ್ ಆಗಲಿದ್ದು, ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ರ್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್ ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಸೇರಿ ಹಲವು ಬೇಡಿಕೆಗಳನ್ನ ಆಟೋ ಚಾಲಕರ ಸಂಘಟನೆಗಳನ್ನ ಸರ್ಕಾರದ ಮುಂದಿಟ್ಟಿವೆ.
ರ್ಯಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಇಲ್ಲದಿದ್ದರೂ ರಾಜರೋಷವಾಗಿ ಸಂಚರಿಸುತ್ತಿವೆ. ಆರ್ಟಿಒ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿವೆ ಎಂದು ಆಟೋ ಚಾಲಕರ ಮೇಲೆ ಆಕ್ರೋಶ ವ್ಯಕ್ತವಾಗಿದೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಬೃಹತ್ ಆಟೋ ರ್ಯಾಲಿ ಮೂಲಕ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿಸಲಾಗಿದೆ. ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ.
Bengaluru: Auto service bandh on 29th: Auto drivers called for strike. Bengaluru: Auto service bandh on 29th: Auto drivers called for strike