ಬೆಂಗಳೂರು ಬುಲ್ಸ್ ಗೆ ನಾಯಕನಾಗಿ ಮಹೇಂದರ್ ಸಿಂಗ್ ನೇಮಕ…
ಅಕ್ಟೋಬರ್ 7 ರಿಂದ ನಡೆಯಲಿರುವ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ನಾಯಕನಾಗಿ ಹಿರಿಯ ಡಿಫೆಂಡರ್ ಮಹೇಂದರ್ ಸಿಂಗ್ ಅವರನ್ನ ಆಯ್ಕೆ ಮಾಡಲಾಗಿದೆ. ಮತ್ತೊಬ್ಬ ಡಿಫೆಂಡರ್ ಸೌರಭ್ ನಂದಲ್ ವೈಸ್ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನಡೆಸಲಿದ್ದಾರೆ. ನಾಯಕ ಉಪನಾಯಕನ ನೇಮಕಾತಿ ಕುರಿತು ಬೆಂಗಳೂರು ಬುಲ್ಸ್ ತಂಡ ಗುರುವಾರ ಸಾಮಾಜಿಕ ತಾಣಗಳಲ್ಲಿ ಅಧಿಕೃತ ಪೋಸ್ಟ್ ಹಾಕುವ ಮೂಲಕ ಘೋಷಿಸಿದೆ.
ಬೆಂಗಳೂರು ಬುಲ್ಸ್ ತಂಡ ಆಟಗಾರರ ಹರಾಜಿನಲ್ಲಿ ತನ್ನ ಸ್ಟಾರ್ ಆಟಗಾರ ಪವನ್ ಶೆರಾವತ್ ಅವರನ್ನ ತಂಡದಿಂದ ಕೈ ಬಿಟ್ಟು ಅಚ್ಚರಿ ಮೂಡಿಸಿತ್ತು. ಇದೀಗ ಇವರ ಸ್ಥಾನಕ್ಕೆ ವಿಕಾಸ ಖಂಡೋಲ ಅವರನ್ನ ಆಯ್ಕೆ ಮಾಡಲಾಗಿದೆ. 1.70 ಕೋಟಿ ರುಪಾಯಿ ನೀಡಿ ಬುಲ್ಸ್ ತನ್ನತ್ತ ಸೆಳೆದುಕೊಂಡಿದೆ. ವಿಕಾಸ್ ಖಂಡೋಲಾ, ಪಿಕೆಎಲ್ ಟೂರ್ನಿಯ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಹರ್ಯಾಣ ಸ್ಟೀಲರ್ಸ್ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ವಿಕಾಸ್ ಖಂಡೋಲಾ, ಬೆಂಗಳೂರು ಬುಲ್ಸ್ ತಂಡದ ಪರ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಪವನ್ ಶೆರಾವತ್ ಅವರ ಅನುಪಸ್ಥಿತಿಯನ್ನು ವಿಕಾಸ್ ಖಂಡೋಲಾ ಯಶಸ್ವಿಯಾಗಿ ತುಂಬಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
Bengaluru Bulls: Mahender Singh appointed as the captain of Bengaluru Bulls in pro kabbadi








