Bengaluru : ಪತಿಗೆ ಜೀವ ತೆಗೆಯಲು ಪ್ರಿಯಕರನ ಗಂಡಸ್ತನಕ್ಕೆ ಸವಾಲ್ ಹಾಕಿದಳು…..
ಪತ್ನಿಯೊಬ್ಬಳು ತನ್ನ ಪತಿಯನ್ನ ಕೊಲೆ ಮಾಡಲು ಪ್ರಿಯಕರನ ಪ್ರೇರೇರಿಪಿಸಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ..
ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪತಿಗೆ ಲೈಂಗಿಕ ಸಕ್ತಿ ಕಡಿಮೆ ಎಂಬ ವಿಚಾರದಿಂದ ಈಕೆ ಬೇಸತ್ತು ಪ್ರಿಯಕರನ ಜೊತೆಗೆ ಕೊಲೆಗೆ ಸಂಚು ರೂಪಿಸಿದ್ದಾಳೆ..
ಗಂಡನ ಕೊಲೆ ಮಾಡಲು ಪ್ರಿಯಕರನ ಗಂಡಸ್ತನಕ್ಕೆ ಸವಾಲು ಹಾಕಿದ್ದಾಳೆ..
ಈ ಖತರ್ನಾಕ್ ಲೇಡಿ ತನ್ನ ಕೊಲೆ ಮಾಡುವುದಕ್ಕಾಗಿಯೇ ಪ್ರಿಯಕರನನ್ನು 9 ದಿನ ಸ್ಟೋರ್ ರೂಮಿನಲ್ಲಿ ಬಚ್ಚಿಟ್ಟಿದ್ದಳಂತೆ.
ನಂತರ ಪತಿಗೆ ಮದ್ಯ ಕುಡಿಸಿ, ಚಿಕನ್ ಕಬಾಬ್ ತಿನ್ನಿಸಿ, ಮತ್ತಿನಲ್ಲಿದ್ದಾಗ ಇಬ್ಬರೂ ಸೇರಿ ಆತನ ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ದೇವಿ ತೋಮಾಂಗ್ (46) ಮತ್ತು ಅಸ್ಸಾಂ ಮೂಲದ ಪ್ರಿಯಕರ ಜೈನುಲ್ ಅಲಿಬಾಬು (28) ಆರೋಪಿಗಳಾಗಿದ್ದಾರೆ..
ರಾಕೇಶ್ ತೋಮಾಂಗ್ (52) ಮೃತ ವ್ಯಕ್ತಿಯಾಗಿದ್ದಾರೆ.
ಮೃತ ರಾಕೇಶ್ ಗೆ ಮದ್ಯ ಸೇವಿಸುವ ಚಟವಿತ್ತು. ಲೈಂಗಿಕ ಆಸಕ್ತಿ ಕಡಿಮೆ ಇತ್ತು. ಇದರಿಂದಾಗಿ 28 ವರ್ಷದ ಜೈನುಲ್ ಜೊತೆ ದೇವಿ ಅಕ್ರಮ ಸಂಬಂಧ ಬೆಳೆಸಿದ್ದಳು.
ರಾಕೇಶ್ ಮದ್ಯ ಸೇವಿಸಿ ಹಲ್ಲೆ ನಡೆಸುತ್ತಿದ್ದರಿಂದ ಬೇಸತ್ತಿದ್ದ ದೇವಿ , ಆತನ ಈ ಲೋಕದಿಂದಲೇ ಮಾಯ ಮಾಡಿಸುವ ಸ್ಕೆಚ್ ಹಾಕಿದ್ದಾಳೆ..
ನವೆಂಬರ್ 5 ರ ರಾತ್ರಿ ಪತಿಗೆ ಕಂಠಪೂರ್ತಿ ಕುಡಿಸಿ ನಂತರ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.. ಆದ್ರೆ ಮರು ದಿನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕಥೆ ಕಟ್ಟಿದ್ದಾಳೆ..
ಆದ್ರೆ ಮರಣೋತ್ತರ ಪರೀಕ್ಷೆಯ ವರದಿಯಿಂದ ಸತ್ಯ ಬಟಾಬಯಲಾಗಿದೆ..
ಅಕ್ರಮಕ್ಕೆ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರಾಕೇಶ್ ನನ್ನು ಕೊಲೆ ಮಾಡಿದರೆ ಮಾತ್ರ ನನ್ನ ಜೊತೆ ಮಲಗಲು ಅವಕಾಶ ನೀಡುತ್ತೇನೆ. ನೀನು ಗಂಡಸಾಗಿದ್ರೆ ಅವನನ್ನು ಕೊಲೆ ಮಾಡು ಎಂದು ದೇವಿ ಪ್ರಿಯಕರನಿಗೆ ಸವಾಲು ಹಾಕಿದ್ದಳು ಎಂದು ವಿಚಾರಣೆ ವೇಳೆ ಪ್ರಿಯಕರ ಬಾಯ್ಬಿಟ್ಟಿದ್ದಾನೆ..
ಪತಿ ಕೊಲೆಯಾದ ಮಾರನೇ ದಿನ ರಾಕೇಶ್ ಫೋನ್ ಪೇಯಿಂದ ಪ್ರಿಯಕರ ಜೈನುಲ್ ಗೆ 50 ಸಾವಿರ ಹಣ ಕಳಿಸಿದ್ದಳು. ಅಷ್ಟೇ ಅಲ್ಲದೇ ತನ್ನದೇ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿ ಪ್ರಿಯಕರನಿಗೆ ಕೊಟ್ಟಿದ್ದಳು. ಬಳಿಕ ದೇವಿ ಫೋನ್ ಕಾಲ್ಸ್ ಮತ್ತು ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಪರಿಶೀಲಿಸಿದಾಗ ಆರೋಪಿ ಜೈನುಲ್ ಬಗ್ಗೆ ಮಾಹಿತಿ ಸಿಕ್ಕಿದೆ.
ಸದ್ಯ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಮುಂದುವರೆಸಿದ್ದಾರೆ..