ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಜೆ.ಜೆ.ನಗರ ಠಾಣಾ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮನ್ಸೂರ್ ಹಾಗೂ ಅಲಿಬಾ ಬಂಧಿತ ಆರೋಪಿಗಳಾಗಿದ್ಧಾರೆ.
ಮನ್ಸೂರ್ ಜೆ.ಜೆ.ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ. ಬಂಧಿತ ಮನ್ಸೂರ್ ನೀಡಿದ ಮಾಹಿತಿ ಮೇರೆಗೆ ಅಲಿಬಾ ಎಂಬಾತನನ್ನೂ ಬಂಧಿಸಲಾಗಿದೆ.
ಬಂಧಿತರಿಂದ 32 ಕೆ.ಜಿ 40 ಗ್ರಾಂ ಗಾಂಜಾ 1 ದ್ವಿಚಕ್ರ ವಾಹನ ವಶಕ್ಕೆ ಪಡಡೆಯಲಾಗಿದೆ.