Bengaluru : ಹೊಸ ವರ್ಷಾಚರಣೆ ವೇಳೆ ಪೊಲೀಸರಿಂದ ಲಾಠಿ ಚಾರ್ಜ್ ..
ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೆಲ ಮಹಿಳೆಯರಿಗೆ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆಗಳು ವರದಿಯಾಗಿವೆ. ಚರ್ಚ್ ಸ್ಟ್ರೀಟ್ನಲ್ಲಿ ಪ್ರಿಯಕರನೊಂದಿಗೆ ಬಂದಿದ್ದ ಯುವತಿಯೊಬ್ಬಳಿಗೆ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಈ ವೇಳೆ ಆಕೆಯ ಗೆಳೆಯ ದುಷ್ಕರ್ಮಿಗಳೊಂದಿಗೆ ಜಗಳಕ್ಕಿಳಿದಿದ್ದು, ಕೈಕೈ ಮಿಲಾಯಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರದಲ್ಲಿ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ತಿಳಿದುಬಂದಿದೆ.
ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪಬ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದು, ಪಬ್ಗಳ ಒಳಗೆ ಜನರು ನೃತ್ಯ ಮಾಡುತ್ತಿರುವವರನ್ನು ನೋಡಲು ಜನರು ಪಬ್ಗಳ ಹೊರಗೆ ಸಾಕಷ್ಟು ಜನರು ನಿಂತಿದ್ದದ್ದು ಕಂಡು ಬಂದಿತ್ತು. ಈ ಜನಸಂದಣಿಯನ್ನು ನಿಯಂತ್ರಿಸಲು ಬೆಂಗಳೂರು ಪೊಲೀಸರು ಕೋರಮಂಗಲದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆಂದು ತಿಳಿದುಬಂದಿದೆ.
ಹೊಸ ವರ್ಷ ಸಂಭ್ರಮ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿ ಭಾರಿ ಪೊಲೀಸರು ಭಾರೀ ಪ್ರಮಾಣದ ಬಿಗಿ ಬಂದೋಬಸ್ತ್ ನಿಯೋಜನೆಗೊಳಿಸಿದ್ದರು. ಚರ್ಚ್ ಸ್ಟ್ರೀಟ್ ಮತ್ತು ಇತರೆ ರಸ್ತೆಗಳಲ್ಲಿ ಬಿಬಿಎಂಪಿ ಮಾರ್ಷಲ್ಗಳು ಮಾಸ್ಕ್ ಧರಿಸುವಂತೆ ಜನರಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ಜೆಪಿ ನಗರ ಸೇರಿದಂತೆ ಹಲವು ಪಬ್ಗಳಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿತ್ತು.
Bengaluru : Lathi charge by police during New Year celebration..