Bengaluru : ಪೀಣ್ಯ ಫ್ಲೈಓವರ್ ಸೇತುವೆ ಮೇಲೆ ಲಘು ವಾಹನ ಸಂಚಾರಕ್ಕೆ ಅವಕಾಶ
ಕೆಲವು ದಿನಗಳಿಂದ ದುರಸ್ತಿಗಾಗಿ ಪೀಣ್ಯ ಫ್ಲೈಓವರ್ ಸೇತುವೆಯನ್ನು ಮುಚ್ಚಲಾಗಿತ್ತು… ಇದ್ರಿಂದ ಪ್ರಯಾಣಿಕರಿಗೆ , ಅದ್ರಲ್ಲೂ ತುಮಕೂರು ಮಾರ್ಗವಾಗಿ ಪ್ರಯಾಣಿಸುವವರಿಗೆ ತೊಂದರೆಯಾಗ್ತಿತ್ತು..
ಇದೀಗ ಆ ರಸ್ತೆ ಪ್ರಯಾಣಕ್ಕೆ ತೆರವಾಗಿದೆ.. ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇಂದು ಲೋಕೋಪಯೋಗಿ ಸಚಿವರಾದ ಶ್ರೀ ಸಿ.ಸಿ .ಪಾಟೀಲರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ಮೇಲ್ಸೇತುವೆಯಲ್ಲಿ ಲಘು ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.









