ಬೆಂಗಳೂರಿನಲ್ಲಿ ಹಿಜಬ್ ಗಲಾಟೆ – ಕಮೀಷನರ್ ಕಮಲ್ ಪಂತ್ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಹಿಜಬ್ ಗಲಾಟೆ ವಿಚಾರವಾಗಿ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ…
ಬೆಳಗ್ಗೆ ಸುಮಾರು 30-40 ಪೋಷಕರು ಶಾಲೆ ಬಳಿ ಬಂದಿದ್ದಾರೆ. ನಿನ್ನೆ ಹೈಕೋರ್ಟ್ ಅದೇಶ ಏನ್ ಬಂದಿದೆ ಅದನ್ನ ಮಕ್ಕಳ ಪೋಷಕರಿಗೆ ಹೇಳಿದ್ದೀವಿ.
ನಮ್ಮ ಪೊಲೀಸರು ಪೋಷಕರಿಗೆ ತಿಳಿ ಹೇಳಿದ್ದಾರೆ. ಪೋಷಕರನ್ನ ಸಮಾಧಾನ ಮಾಡಿ ಕಳುಹಿಸಿದ್ದೇವೆ. ಯಾರು ಈ ಬಗ್ಗೆ ದೂರು ಕೊಟ್ಟಿಲ್ಲ. ಯಾವುದೇ ಗಲಾಟೆ ಸಹ ನಡೆದಿಲ್ಲ.
ಶಾಲೆ ಬಗ್ಗೆ ಆಗಲಿ, ಪೋಷಕರ ಮೇಲೆ ಆಗಲಿ ಕ್ರಮ ಆಗಿಲ್ಲ. ಈ ಬಗ್ಗೆ ಯಾರಾದರೂ ದೂರು ಕೊಟ್ಟರೆ, ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಹಿಜಬ್ ಸಂಬಂಧ ಪೋಸ್ಟ್ ಹಾಕಿದ್ರೆ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ..
ಅಲ್ಲದೇ ಯಾರಾದ್ರೂ ವಿರೋಧ ಅಥವಾ ಪರವಾಗಿ ಪೋಸ್ಟ್ ಮಾಡಿದ್ದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ..








