Bengaluru : ಬೆಂಗಳೂರಿನ ಪಬ್ ನಲ್ಲಿ ಕನ್ನಡ ಹಾಡು ಹಾಕಿ ಎಂದವರ ಮೇಲೆ ಡಿಜೆಯಿಂದ ಹಲ್ಲೆಗೆ ಯತ್ನ
ಕರ್ನಾಟಕದಲ್ಲೇ ಇರುವ ಪಬ್ ಗಳಲ್ಲಿ ಕನ್ನಡ ಹಾಡು ಹಾಕದೆ ಕನ್ನಡ ಭಾಷೆ ಕಡೆಗಣನೆ ಮಾಡ್ತಿರುವ ಅನುಮಾನವೊಂದು ಇದೀಗ ಮೂಡಲಾರಂಭಿಸಿದೆ.
ಹೌದು ಬೆಂಗಳೂರಿನ ಬದ್ಮಾಷ್ ಹೆಸರಿನ ಪಬ್ ಒಂದ್ರಲ್ಲಿ ಯುವತಿ ಮತ್ತಾಕೆ ಕುಟುಂಬವರು ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಡಿಜೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದೂ ಅಲ್ದೇ , ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ..
ಈ ಮೂಲಕ ಬೆಳಗಾವಿಯಲ್ಲಿ ಅಷ್ಟೇ ನಮ್ಮ ಕನ್ನಡಿಗರ ಮೇಲೆ ದರ್ಪ ತೋರುತ್ತಿಲ್ಲ.. ಬೆಂಗಳೂರಿನ ಪಬ್ ಗಳಲ್ಲೂ ಇದೇ ಸ್ಥಿತಿ ಇದೆ ಎಂದೆನಿಸುತ್ತಿದೆ..
ಕೋರಮಂಗಲ 80 ಫೀಟ್ ರಸ್ತೆಯಲ್ಲಿರು ಬದ್ಮಾಷ್ ಪಬ್ ನಲ್ಲಿ ಈ ಘಟನೆ ನಡೆದಿದೆ.. ಪಬ್ ಮೇಲೆ ಕನ್ನಡದ ಬಾವುಟ ಹಾಕಿಕೊಂಡಿದ್ದಾರೆ… ಆದ್ರೆ ಕನ್ನಡ ಹಾಡುಗಳನ್ನ ಪ್ಲೇ ಮಾಡೋದಕ್ಕೆ ಡಿಜೆ ನಕರ ಮಾಡಿದ್ದಾನೆ..
ಯುವತಿ ಸುಮಿತಾ ತಮ್ಮ ಕುಟುಂಬದ ಜೊತೆಗೆ ಪಬ್ ಗೆ ಬಂದಿದ್ದರು.. ತಮ್ಮ ಸಹೋದರ ನಂದಕಿಶೋರ್ ಅವರ ಬರ್ತ್ ಡೇ ಸೆಲೆಬ್ರೇಷನ್ ಗೆ…. ಆದ್ರೆದ ಅಲ್ಲಿ ಎಷ್ಟು ಹೊತ್ತಾದರೂ ಒಂದೇ ಒಂದು ಕನ್ನಡ ಹಾಡು ಬಾರದೇ ಹೋದಾಗ ಯುವತಿ ಮತ್ತೆ ಪರಿವಾರದವರು ಡಿಜೆ ಬಳಿ ಕನ್ನಡ ಹಾಡು ಹಾಕುವಂತೆ ಕೇಳೆದ್ದಾರೆ,,, ಆಗ ಡಿಜೆ ಸಿದ್ಧಾರ್ಥ್ @ ಆಪೋಸಿಟ್ ಕನ್ನಡ ಹಾಡುಗಳನ್ನೆಲ್ಲಾ ಹಾಕೋದಕ್ಕೆ ಆಗಲ್ಲ,,, ಬೇಕಿದ್ರೆ ಬೇರೆ ಪಬ್ ಗೆ ಹೋಗಿ ಎಂದು ಅವಾಜ್ ಹಾಕಿರೋದು ಅಲ್ದೇ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ..
ಫೆಬ್ರವರಿ 5 ರಂದು ಮಧ್ಯರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಕನ್ನಡವನ್ನು ಕೇವಲವಾಗಿ ಆಡಿಕೊಂಡ ಆರೋಪವೂ ಕೇಳಿಬಂದಿದೆ. ಕನ್ನಡ ಹಾಡು ಹಾಕದೇ ತೆಲುಗು ತಮಿಳು ಹಿಂದಿ ಹಾಡುಗಳನ್ನ ಪ್ಲೇ ಮಾಡಲಾಗ್ತಿತ್ತು ಎನ್ನಲಾಗಿದೆ. ಎರಡು ಗಂಟೆವರೆಗೂ ಪಬ್ ಬಾಗಿಲು ಓಪನ್ ಇದ್ರೂ ಪೊಲೀಸರು ಮಾತ್ರ ಸ್ಥಳಕ್ಕೆ ಬರಲಿಲ್ಲ ಎಂದು ಕೂಡ ಯುವತಿ ಹೇಳಿದ್ದಾರೆ.. ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
bengaluru pub – kannada song controvercy – dj