ಕೋವಿಡ್ : ಹೋಟಲ್ ಕ್ವಾರಂಟೈನ್ ದರ ನಿಗದಿ
ಬೆಂಗಳೂರು : ಕೊರೊನಾ 3ನೇ ಅಲೆ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರವು ನಾನಾ ಕ್ರಮಗಳನ್ನ ಕೈಗೊಳ್ತಿದೆ.. ಈ ನಡುವೆ ಕೊರೊನಾ ನೆಗೆಟಿವ್ ವರದಿ ಇಲ್ಲದೆ ನಗರ ಪ್ರವೇಶಿಸುವ ಪ್ರಯಾಣಿಕರನ್ನು ಕ್ವಾರಂಟೈನ್ಗೊಳಪಡಿಸುವ ಹೋಟೆಲ್ಗಳ ದರ ನಿಗದಿ ಮಾಡಲಾಗಿದೆ.
ಆಹಾರ ಹೊರತುಪಡಿಸಿ ಒಂದು ದಿನಕ್ಕೆ ಗರಿಷ್ಠ 750 ರೂ. ದರ ನಿಗದಿ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಬಿಬಿಎಂಪಿ ನಿಗದಿಪಡಿಸಿರುವ ಹೋಟೆಲ್ಗಳಲ್ಲಿ ಕ್ವಾರಂಟೈನ್ಗೆ ಒಳಗಾದರೆ ಅಂತಹವರ ವಾಸ್ತವ್ಯ ದರವನ್ನು ಪಾಲಿಕೆಯ ಭರಿಸಲಿದೆ. ಒಂದು ವೇಳೆ ಬಿಬಿಎಂಪಿ ನಿಗದಿಪಡಿಸುವ ಹೋಟೆಲ್ಗಳ ಬದಲು ಬೇರೆ ಹೋಟೆಲ್ಗಳಲ್ಲಿ ತಂಗಲು ಪ್ರಯಾಣಿಕರು ಇಚ್ಚಿಸಿದರೆ ಅದರ ಖರ್ಚು ವೆಚ್ಚವನ್ನು ಅವರೇ ನೋಡಿಕೊಳ್ಳಬೇಕಾಗುತ್ತದೆ.
ಕ್ವಾರಂಟೈನ್ಗೆ ನಿಗದಿಪಡಿಸಿರುವ ಹೋಟೆಲ್ಗಳಿಗೆ ಆರೋಗ್ಯ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ರಕ್ಷಣಾತ್ಮಕ ಸಾಧನಗಳನ್ನು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಕ್ವಾರಂಟೈನ್ಗೆ ಗುರುತಿಸಿರುವ ಹೋಟೆಲ್ಗಳ ವಿರುದ್ಧ ದೂರುಗಳು ಬಂದಲ್ಲಿ ಸೂಕ್ತ ಕ್ರಮ ವಹಿಸುವಂತೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರು ಆದೇಶ ಹೊರಡಿಸಿದ್ದಾರೆ.
ಲೈವ್ ನಲ್ಲಿ ಪ್ರಸಾರವಾಗುವಾಗ್ಲೇ ನಟಿ ಮನೆ ಮೇಲೆ ರೇಡ್ ಮಾಡಿ, ಬಂಧಿಸಿ ಕರೆದೊಯ್ದ ಪೊಲೀಸರು..!