Bengaluru : ಲಾಂಗ್ ಹಿಡಿದು ಎಲ್ಲರನ್ನೂ ಹೆದರಿಸುತ್ತಾ ಪುಂಡಾಟ ಮೆರೆದಿದ್ದ ವಿದೇಶಿ ಪ್ರಜೆ ಬಂಧನ
ಕುಡಿದ ಅಮಲಿನಲ್ಲಿ ನಾನೇ ರೌಡಿ ಎಂದು ಲಾಂಗ್ ಹಿಡಿದು ಎಲ್ಲರನ್ನೂ ಹೆದರಿಸುತ್ತಾ ಪುಂಡಾಟ ಮೆರೆದಿದ್ದ ವಿದೇಶಿ ಪ್ರಜೆಯನ್ನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.. ಈತ ಪೊಲೀಸ್ ಠಾಣೆಯ ಬಳಿಯೇ ಪೊಲೀಸರ ಮುಂದೆಯೇ ಲಾಂಗ್ ಹಿಡಿದು ಪುಂಡಾಟ ಮೆರೆದಿದ್ದ..
ಓಕಾವೋ ಲಿಯೋಸ್ ಎಂಬ ವಿದೇಶಿ ಪ್ರಜೆ ಬಂಧಿತ ಆರೋಪಿಯಾಗಿದ್ದಾನೆ. ಮದ್ಯದ ಅಮಲಿನಲ್ಲಿ ಮಾರಕಸ್ತ್ರ ಹಿಡಿದು ಕೊಂಡು ಸಾರ್ವಜನಿಕವಾಗಿ ಓಡಾಡಿ ಜನರಿಗೆ ಹೆದರಿಸಿದ್ದಾನೆ.
ಹೆಣ್ಣೂರು ಪೊಲೀಸ್ ಠಾಣೆಯ ಮುಂಭಾಗದಲ್ಲಿಯೂ ಮಾರಕಸ್ತ್ರ ಹಿಡಿದು ಓಡಾಡಿದ್ದ.. ಈತ ಐವರಿಕೋಸ್ಟ್ ನ ಪ್ರಜೆಯಾಗಿದ್ದಾನೆ..
ಅಲ್ಲದೇ ವಶಕ್ಕೆ ಪಡೆಯಲು ಹೋದ ಎಎಸ್ ಐ ಗೆ ಬರಿಗೈನಲ್ಲಿ ಹಲ್ಲೆ ನಡೆಸಿದ್ದಾನೆ. ಶರಣಾಗುವಂತೆ ಹೇಳಿದ್ರೂ ಮಾರಕಸ್ತ್ರ ಬೀಸುತ್ತಾ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ..
ಪೊಲೀಸರು ಆರೋಪಿ ಪುಂಡಾಟದ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಆರೋಪಿ ಪೊಲೀಸರಿಗೆ ಹಲ್ಲೆ ಮಾಡುವ , ಲಾಂಗ್ ಬೀಸುವ ಗಲಾಟೆ ವಿಡಿಯೋಗಳಿವೆ..