ಜಪ್ತಿಯಾದ ವಾಹನ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ…
ಅಪಘಾತ ಪ್ರಕರಣದಲ್ಲಿ ಜಪ್ತಿಯಾದ ವಾಹನಗಳನ್ನು 24 ಗಂಟೆಯೊಳಗೆ ಅದರ ಮಾಲೀಕರಿಗೆ ತಲುಪಿಸಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಆದೇಶಿಸಿದ್ದಾರೆ. ಹಾಗಾಗಿ ಇನ್ನು ಆಕ್ಸಿಡೆಂಟ್ ಪ್ರಕರಣಗಳಲ್ಲಿ ಜಪ್ತಿಯಾದ ವಾಹನಗಳನ್ನು ಮಾಲೀಕರು 24 ಗಂಟೆಯೊಳಗೆ ವಾಪಸ್ ಪಡೆದುಕೊಳ್ಳಬಹುದಾಗಿದೆ.
ಈ ಹಿಂದೆ ಜಪ್ತಿಯಾದ ವಾಹನಗಳು ಕೇಸ್ನ ತನಿಖೆಯ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೆ ಸ್ಟೇಷನ್ನಲ್ಲಿ ಇರುತ್ತಿದ್ದವು. ಇದರಿಂದಾಗಿ ಸ್ಟೇಷನ್ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ವಿಶೇಷ ಕಮಿಷನರ್ ಡಾ.ಸಲೀಂ, ಆಕ್ಸಿಡೆಂಟ್ ಆದ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. RTOದಿಂದ ಪರಿಶೀಲನೆ ನಡೆಸಿ, ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಆಗಿದೆಯಾ ಎಂದು ರಿಪೋರ್ಟ್ ಮಾಡಿ ನಂತರ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
Bengaluru Traffic Police: Impounded vehicle to be handed over to owner within 24 hours…