ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮನೆ-ಮನೆ ಮರುಪರಿಶೀಲನೆ ಪ್ರಕ್ರಿಯೆ ಆರಂಭವಾಗಿದ್ದು, ವಿವಿಧ ಎಸ್ಕಾಂಗಳ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ವೇಳೆ ಮಾಹಿತಿ ಸಂಗ್ರಹದ ವೇಳೆ ಜಾತಿ ಪ್ರಮಾಣಪತ್ರ ಅಥವಾ ಜಾತಿ ಮಾಹಿತಿ ಕೇಳಲಾಗುತ್ತಿದೆ ಎಂಬ ವಿಷಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಉಚಿತ ವಿದ್ಯುತ್ ಯೋಜನೆಗೆ ಜಾತಿ ಮಾಹಿತಿ ಏಕೆ ಅಗತ್ಯ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದರು.
ಈ ಹಿನ್ನೆಲೆ, ಬೆಸ್ಕಾಂ (BESCOM) ಸ್ಪಷ್ಟನೆ ನೀಡಿ, ಗೃಹಜ್ಯೋತಿ ಮರುಪರಿಶೀಲನೆ ವೇಳೆ ಜಾತಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಅಧಿಕೃತ ಆದೇಶ ಹೊರಡಿಸಿದೆ.
ಆದ್ದರಿಂದ, ಫಲಾನುಭವಿಗಳು ಜಾತಿ ಮಾಹಿತಿಯನ್ನು ನೀಡದ ಕಾರಣಕ್ಕೆ ಯೋಜನೆಯ ಸೌಲಭ್ಯ ನಿರಾಕರಿಸಲಾಗುವುದಿಲ್ಲ ಎಂಬುದು ಬೆಸ್ಕಾಂನ ಸ್ಪಷ್ಟನೆಯಾಗಿದೆ.
ಮರುಪರಿಶೀಲನೆಯ ಉದ್ದೇಶ ಯೋಜನೆಯ ದುರುಪಯೋಗ ತಡೆದು, ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.








