ಮೂಗು ಕಟ್ಟಿದಾಗ ತಿನ್ನಲು ಅತ್ಯುತ್ತಮ ಆಹಾರಗಳು Saakshatv healthtips stuffy nose
ಮಂಗಳೂರು, ನವೆಂಬರ್28: ಕಟ್ಟಿದ ಮೂಗು, ಶೀತ, ಸೈನುಟಿಸ್ ಅಥವಾ ಜ್ವರಕ್ಕೆ ಕಾರಣವಾಗಬಹುದು. ನಿರಂತರ ಸೀನುವಿಕೆಯಿಂದ ಇದು ನಿಮಗೆ ಅಸ್ವಸ್ಥತೆ ಅಥವಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರೊಂದಿಗೆ ಹತ್ತಿರವಿರುವ ಜನರಿಗೆ ಸೋಂಕು ಸುಲಭವಾಗಿ ಹರಡಬಹುದು. ಮೂಗು ಕಟ್ಟಲು ಕಾರಣವಾಗುವ ಸೋಂಕು ಅಥವಾ ಯಾವುದೇ ಉರಿಯೂತವನ್ನು ನಿಯಂತ್ರಿಸುವ ಶಕ್ತಿ ಆಹಾರಕ್ಕೆ ಇದೆ. ಮೂಗು ಕಟ್ಟಿದಾಗ ಯಾವುದೇ ಔಷಧಿಗಳಿಲ್ಲದೆ ನೈಸರ್ಗಿಕವಾಗಿ ನಾವು ಸೇವಿಸುವ ಆಹಾರದಿಂದ ನಿಯಂತ್ರಿಸಬಹುದಾಗಿದೆ. Saakshatv healthtips stuffy nose
ಬೆಳ್ಳುಳ್ಳಿ – ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಮೂಗು ಕಟ್ಟಿದಾಗ ಬೆಳ್ಳುಳ್ಳಿ ಸೇವನೆ ಪರಿಣಾಮಕಾರಿಯಾಗಿದೆ.
ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರ ಮೂಲಕ ಅಥವಾ ಸೂಪ್ನಲ್ಲಿ ಸೇರಿಸುವುದರಿಂದ ಉರಿಯೂತವನ್ನು ಸುಲಭವಾಗಿ ತೆರವುಗೊಳಿಸಬಹುದು ಮತ್ತು ಉಸಿರಾಟವನ್ನು ಸುಗಮಗೊಳಿಸಬಹುದು.
ಚಿಕನ್ ಸೂಪ್ – ಚಿಕನ್ ಸೂಪ್ ಕಟ್ಟಿದ ಮೂಗನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಕೋಳಿಯಲ್ಲಿರುವ ಅಮೈನೊ ಆಮ್ಲ ಕಟ್ಟಿದ ಮೂಗನ್ನು ತೆರವುಗೊಳಿಸುತ್ತದೆ. ಒಂದು ಬೌಲ್ ಬಿಸಿ ಚಿಕನ್ ಸೂಪ್ ನಿಂದ ಲೋಳೆ ಬೇರ್ಪಡುತ್ತದೆ ಮತ್ತು ಉಸಿರಾಡಲು ಸುಲಭವಾಗುತ್ತದೆ.
ಶೀತದ ಪರಿಣಾಮವನ್ನು ಕಡಿಮೆ ಮಾಡುವ ಅಶ್ವಗಂಧ ಚಹಾ ಸೇವಿಸುವ ಮೊದಲು ತಿಳಿದಿರಬೇಕಾದ ವಿಷಯಗಳು
ಪುದೀನ – ಪುದೀನವು ಮೂಗಿನ ಹಾದಿಗಳಲ್ಲಿನ ನರ
ರಿಸೆಪ್ಟರ್ ಅನ್ನು ಸುಧಾರಿಸುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ. ಗಿಡಮೂಲಿಕೆಗಳಲ್ಲಿನ ಮೆಂಥಾಲ್ ಮೂಗಿನ ಉಸಿರಾಟದ ಹಾದಿಯನ್ನು ತೆರವುಗೊಳಿಸುತ್ತದೆ ಮತ್ತು ಹೆಚ್ಚಿನ ಗಾಳಿಯನ್ನು ಹಾದುಹೋಗುವಂತೆ ಮಾಡುತ್ತದೆ.
ಮಸಾಲೆಯುಕ್ತ ಆಹಾರ – ಮಸಾಲೆಯುಕ್ತ ಆಹಾರವು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕಟ್ಟಿದ ಮೂಗನ್ನು ತೆರವುಗೊಳಿಸುತ್ತದೆ. ಕ್ಯಾಪ್ಸೈಸಿನ್ ಎಂಬುವುದು ಸೈನಸ್ ನೋವನ್ನು ಕಡಿಮೆ ಮಾಡುವ ಸಂಯುಕ್ತವಾಗಿದೆ. ಮಸಾಲೆಯುಕ್ತ ಆಹಾರವು ಉಷ್ಣ ಗುಣ ಹೊಂದಿದ್ದು, ಅದು ಕಟ್ಟಿದ ಮೂಗನ್ನು ಬಿಡುಗಡೆ ಮಾಡುತ್ತದೆ ಮತ್ತು ಸೋಂಕನ್ನು ಕಡಿಮೆ ಮಾಡುತ್ತದೆ.
ಕಟ್ಟಿಕೊಂಡ ಮೂಗಿನೊಂದಿಗೆ ಹೋರಾಡಲು, ಉಸಿರಾಟವನ್ನು ಸರಾಗಗೊಳಿಸುವ ಬಿಸಿ ಸ್ನಾನ ಮಾಡಿ ಮತ್ತು ಹಬೆಯನ್ನು ಉಸಿರಾಡಿ. ಬಿಸಿನೀರನ್ನು ಆಗಾಗ್ಗೆ ಕುಡಿಯುವುದರಿಂದ ಲೋಳೆಯು ಬೇಗನೆ ಕರಗುತ್ತದೆ, ಇದರಿಂದಾಗಿ ಕಟ್ಟಿದ ಮೂಗಿನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಮೂಗಿನ ಕಟ್ಟಿದ್ದರೆ ನಿಮ್ಮ ಮುಖವನ್ನು ಒದ್ದೆಯಾದ ಬಟ್ಟೆಯಿಂದ ಮಸಾಜ್ ಮಾಡಿ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲಕ್ಕೆ ಕರಿಮೆಣಸಿನ 5 ಸೂಪರ್ ಪವರ್ಫುಲ್ ಆರೋಗ್ಯ ಪ್ರಯೋಜನಗಳುhttps://t.co/FLJEctVJQv
— Saaksha TV (@SaakshaTv) November 26, 2020
ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ #yoga#Kannada#yogateacherhttps://t.co/pRB58lu6J7
— Saaksha TV (@SaakshaTv) November 25, 2020