ಕರೊನಾ ವೈರಸ್ ನ BF.7 ರೂಪಾಂತರ ಭಾರತ್ಕಕೆ ಆಘಾತಕಾರಿಯಲ್ಲ ಎಂದ ಹಿರಿಯ ವಿಜ್ಞಾನಿ…
ಕೊರೊನಾ ವೈರಸ್ ಓಮಿಕ್ರಾನ್ ರೂಪಾಂತರದ ಉಪ ರೂಪಾಂತರ BF.7 ಬಗ್ಗೆ ಭಾರತ ಹೆಚ್ಚು ಚಿಂತಿಸಬೇಕಿಲ್ಲ ಎಂದು ಪ್ರಮಖ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ (ಟಿಐಜಿಎಸ್) ನಿರ್ದೇಶಕ ರಾಕೇಶ್ ಮಿಶ್ರಾ ಅವರು ಮಾತನಾಡುತ್ತಾ ಫೇಸ್ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಜನಸಂದಣಿಯನ್ನು ತಪ್ಪಿಸುವುದು ಯಾವಾಗಲೂ ಸೂಕ್ತ ಎಂದು ಎಚ್ಚರಿಸಿದ್ದಾರೆ.
CSIR-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರದ ಮಾಜಿ ನಿರ್ದೇಶಕರು ಆಗಿರುವ ಇವರು ಚೀನಾ ದೇಶ ಭಾರತ ಎದುರಿಸಿದ ಸೊಂಕಿನ ವಿವಿಧ ಅಲೆಗಳನ್ನ ಎದುರಿಸಿದ ಕಾರಣ ಚೀನಾದಲ್ಲಿ ಇಷ್ಟೊಂದು ಕೋವಿಡ್ – 19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.
” ಈಗ ಹರಡುತ್ತಿರುವುದು Omicron ನ ಉಪ-ರೂಪಾಂತರವಾಗಿದ್ದು, ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನ ಹೊರತು ಪಡಿಸಿದರೆ ದೊಡ್ಡ ವ್ಯತ್ಯಾಸವಿಲ್ಲ “ ಎಂದು ರಾಕೇಶ್ ಮಿಶ್ರ ತಿಳಿಸಿದ್ದಾರೆ. ನಮ್ಮಲ್ಲಿ ಹೆಚ್ಚಿನ ಜನರು Omicron ತರಂಗದ ಮೂಲಕ ಹೋಗಿದ್ದೇವೆ. ಆದ್ದರಿಂದ, ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಮೂಲಭೂತವಾಗಿ , ಇದು ಅದೇ ವೈರಸ್,” ಅವರು ಹೇಳಿದ್ದಾರೆ.
BF.7 variant of coronavirus not worrisome for India, assures senior scientist