122 ವಿವಿಐಪಿಗಳ ಭದ್ರತೆ ಹಿಂಪಡೆದ ಭಗವಂತ್ ಮಾನ್ – Saaksha Tv
ಪಂಜಾಬ್: ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭಗವಂತ್ ಮಾನ್ ಅವರು ರಾಜ್ಯದ ಅನೇಕ ವಿವಿಐಪಿಗಳು ಸೇರಿದಂತೆ 122 ಮಾಜಿ ಸಂಸದರು ಮತ್ತು ಶಾಸಕರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲು ಆದೇಶ ಹೊರಡಿಸಿದ್ದಾರೆ.
ಒಂದೆಡೆ ಪೊಲೀಸ್ ಠಾಣೆಗಳು ಖಾಲಿ ಬಿದ್ದಿದ್ದರೆ, ಮತ್ತೊಂದೆಡೆ ನಾಯಕರ ಮನೆ ಮುಂದೆ ಟೆಂಟ್ ಹಾಕಿ ಭದ್ರತೆ ಕಲ್ಪಿಸಲಾಗಿದೆ. ಆದರೆ ಈ ಎಲ್ಲದಕ್ಕಿಂತಲೂ ಮೂರೂವರೆ ಕೋಟಿ ಜನರಿಗೆ ಸುರಕ್ಷತೆ ಒದಗಿಸುವುದು ಹೆಚ್ಚು ಮುಖ್ಯ. ಇದರ ಹೊರೆಯನ್ನು ಪೊಲೀಸರ ಮೇಲೆ ಹೊರೆಸುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬಾದಲ್ ಕುಟುಂಬಕ್ಕೆ ಭದ್ರತೆ ನೀಡಲಾಗಿದ್ದು, ಮಾಜಿ ಸಿಎಂಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚರಣ್‍ಜಿತ್ ಸಿಂಗ್ ಚನ್ನಿ, ಉಳಿದ ಎಲ್ಲ ಕಾಂಗ್ರೆಸ್ ಮತ್ತು ಅಕಾಲಿದಳದ ನಾಯಕರಿಗೆ ನೀಡಿದ ಭದ್ರತೆಯನ್ನು ಹಿಂಪಡೆಯಲಾಗಿದೆ.