ಈದ್ ಹಬ್ಬದ ಬಿಡುಗಡೆಗೆ ಡೇಟ್ ಲಾಕ್ ಮಾಡಿದ ಟೈಗರ್ 3
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತೊಮ್ಮೆ ಘರ್ಜಿಸಲು ರೆಡಿಯಾಗಿದ್ದಾರೆ. ಸಲ್ಲು ಅಭಿನಯದ ಟೈಗರ್ ಸರಣಿಯ 3 ನೇ ಚಿತ್ರ ಟೈಗರ್ 3 ಚಿತ್ರ ಬಿಡುಗಡೆ ದಿನಾಂಕವನ್ನ ಘೋಷಿಸಲಾಗಿದೆ.
ಕತ್ರೀನಾ, ಸಲ್ಮಾನ್ ಅಭಿನಯದ ಟೈಗರ್ ಚಿತ್ರ 2023 ಈದ್ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಸಿನಿಮಾ ತಂಡ ಹೇಳಿದೆ. ಏಪ್ರಿಲ್ 21 2023 ರ ದಿನಾಂಕವನ್ನ ಟೈಗರ್ ಗಾಗಿ ಲಾಕ್ ಮಾಡಲಾಗಿದೆ.
ಆದಿತ್ಯಾ ಚೋಪ್ರಾ ಅವರ ಯಶ್ ರಾಜ್ ಫಿಲಂಸ್ ಬ್ಯಾನರ್ ನಡಿ ತಯಾರಾಗುತ್ತಿರುವ 50 ಚಿತ್ರ ಟೈಗರ್ ಹಿಂದಿ ತಮಿಳು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರಕ್ಕೆ ಮನೀಶ್ ಶರ್ಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಏಕ್ತಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ನಂತರ ಮತ್ತೊಮ್ಮೆ ಕತ್ರೀನಾ ಮತ್ತು ಸಲ್ಮಾನ್ ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನ ಘೋಷಿಸಲೆಂದು ಚಿತ್ರದ ಸಣ್ಣ ಝಲಕ್ ಅನ್ನ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.