ಅಕ್ಟೋಬರ್ ನಲ್ಲಿ ‘ಭಜರಂಗಿ 2’ ಅಬ್ಬರ : ರಿಲೀಸ್ ಗೆ ಹೊಸ ದಿನಾಂಕ  ಘೋಷಣೆ  

1 min read

ಅಕ್ಟೋಬರ್ ನಲ್ಲಿ ‘ಭಜರಂಗಿ 2’ ಅಬ್ಬರ : ರಿಲೀಸ್ ಗೆ ಹೊಸ ದಿನಾಂಕ  ಘೋಷಣೆ

ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ಟೀಸರ್ ಹಾಗೂ ಪೋಸ್ಟರ್ ಗಳಿಂದ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ನಡುವೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದು, ಅಂತಹವರಿಗೊಂದು ಗುಡ್ ನ್ಯೂಸ್ ಸಿಕ್ಕಿದೆ.

ಭಜರಂಗಿ 2 ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಅಂದ್ಹಾಗೆ ಸಿನಿಮಾ ಅಕ್ಟೋಬರ್ ನಲ್ಲಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಿನಿಮಾ ಯಾವಾಗಲೋ ರಿಲೀಸ್ ಆಗಿ ಧೂಳೆಬ್ಬಿಸಬೇಕಿತ್ತು. ಆದ್ರೆ ಕೊರೊನಾ ಹಾವಳಿಯಿಂದಾಗಿ ಎಲ್ಲಾ ಪ್ಲಾನ್ ಗಳು ಪೇಲಾಗಿದ್ದವು. ಇನ್ನೂ ಸೆಪ್ಟೆಂಬರ್ 10 ಕ್ಕೆ ಈ ಹಿಂದೆ ರಿಲೀಸ್ ದಿನಾಂಕ ಫಿಕ್ಸ್ ಆಗಿತ್ತು. ಆದ್ರೆ ಸಿನಿಮಾ ಮಂದಿರಗಳಲ್ಲಿ 100 % ಸೀಟಿಗ್ ಗೆ ಅವಕಾಶ ನೀಡದ ಹಿನ್ನೆಲೆ ಮತ್ತೆ ಪೋಸ್ಟ್ ಪೋನ್ ಆಗುವ ಮೂಲಕ ಅಭಿಮಾನಿಗಳನ್ನ ನಿರಾಸೆಗೊಳಿಸಿತ್ತು.

ಇದೀಗ ಸಿನಿಮಾ  ಅಕ್ಟೋಬರ್ 29 ರಂದು ರಿಲೀಸ್ ಆಗಲಿದೆ ಎಂದು ಸಿನಿಮಾ ತಂಡ ಹೊಸ ದಿನಾಂಕ ಘೋಷಣೆ ಮಾಡಿದೆ. ಮುಂದಿನ ತಿಂಗಳಿಂದ ಸಿನಿಮಾ ಥಿಯೇಟರ್ ಗಳಲ್ಲಿ 100 % ಸೀಟಿಂಗ್ ಗೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಸಿನಿಮಾ ತಂಡ ೀ ನಿರ್ಧಾರ ತೆಗೆದುಕೊಂಡಿದೆ.

ಅಂದ್ಹಾಗೆ ಭಜರಂಗಿ2 ನಂತರ ಶಿವಣ್ಣ ಇನ್ನೂ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಲಿದ್ದಾರೆ. ಪ್ರಮುಖವಾಗಿ ಹರ್ಷ ಅವರ ನಿರ್ದೇಶನದಲ್ಲೇ ಮೂಡಿಬರಲಿರುವ ಹೊಸ ಸಿನಿಮಾ ವೇದದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ. ಭಜರಂಗಿ 2 ಗೆ ಹರ್ವ ಻ವರೇ ಆಕ್ಷನ್ ಕಟ್ ಹೇಳಿದ್ದಾರೆ.

ಮತ್ತೊಂದು ದುಬಾರಿ ಕಾರಿನ ‘ಒಡೆಯ’ನಾದ ದರ್ಶನ್..!

ವೀಕೆಂಡ್ ನಲ್ಲಿ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ – ಇಲ್ಲಿದೆ ಪಟ್ಟಿ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd