ನಾಳೆ ಭಾರತ್ ಬಂದ್ | ಏನಿರುತ್ತೆ..? ಏನಿರಲ್ಲ..?
ಬೆಂಗಳೂರು : ಒಕ್ಕೂಟ ಸರ್ಕಾರ ಜಾರಿ ಮಾಡಿರುವ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಾಳೆ ಭಾರತ್ ಬಂದ್ ಗೆ ರೈತ ಪರ ಸಂಘಟನೆಗಳು ಕರೆ ಕೊಟ್ಟಿವೆ. ಈ ಬಂದ್ ಗೆ ಐನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನೂ ಕೆಲ ಸಂಘಟನೆಗಳು ಬಂದ್ ಗೆ ನೈತಿಕ ಬೆಂಬಲ ಸೂಚಿಸಿದ್ದು, ಕೆಲಸ ಕಾರ್ಯಗಳು ಯಥಾಸ್ಥಿತಿಯಲ್ಲಿ ನಡೆಯುತ್ತವೆ.
ಇನ್ನು ರಾಜ್ಯದಲ್ಲೂ ಬಂದ್ ಯಶಸ್ವಿಗೊಳಿಸಲು ರೈತ ಪರ ಸಂಘಟನೆಗಳು ನಿರ್ಧಾರ ಮಾಡಿದ್ದು, ನಾಳೆ ಏರುತ್ತೆ..? ಏನಿರಲ್ಲ..? ಎಂಬ ಮಾಹಿತಿ ಇಲ್ಲಿದೆ.
ನಾಳೆ ಎಂದಿನಂತೆ ಬಸ್ ಸಂಚಾರ ಇರುತ್ತೆ. ಬೆಂಗಳೂರಿನಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸೇವೆಗಳು ಇರಲಿವೆ. ಓಲಾ, ಉಬರ್ ಟ್ಯಾಕ್ಸಿ ಸೇವೆಯೂ ಲಭ್ಯವಿರಲಿದೆ.
ಹೋಟೆಲ್ & ರೆಸ್ಟೋರೆಂಟ್ ಎಂದಿನಂತೆ ತೆರೆಯಲಿವೆ.
ನಾಳೆ ಎಂದಿನಂತೆ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಓಪನ್ ಇರಲಿದೆ.
ಬಸ್ ಸಂಚಾರ ಇದ್ದರೂ ನಾಳೆ ಹೆದ್ದಾರಿ ಬಂದ್ ಆಗುವ ಸಾಧ್ಯತೆಗಳಿವೆ. ರೈತ ಸಂಘಟನೆಗಳು ಹೆದ್ದಾರಿ ಬಂದ್ ಮಾಡಲು ನಿರ್ಧಾರ ಮಾಡಿವೆ.
ಮುಖ್ಯವಾಗಿ ನಾಳೆ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ. ಬದಲಿಗೆ ಎಂದಿನಂತೆ ಶಾಲಾ-ಕಾಲೇಜು ತರಗತಿಗಳು ನಡೆಯಲಿವೆ