ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಅಕೌಂಟೆಂಟ್ ತರಬೇತಿಗಾಗಿ ಆನ್-ಲೈನ್ ಅರ್ಜಿ ಆಹ್ವಾನ
ಬೆಂಗಳೂರು, ಜುಲೈ 31 : ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಅಪ್ರೆಂಟಿಸ್-ಷಿಪ್ ಉತ್ತೇಜನ ಯೋಜನೆಯಡಿ ಅಕೌಂಟೆಂಟ್ ತರಬೇತಿಗಾಗಿ ಬಿ.ಕಾಂ ಪದವೀಧರ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ತರಬೇತಿಯ ಆರಂಭಿಕ ಅವಧಿಯು 1 ವರ್ಷದ್ದಾಗಿದ್ದು, ಬಿ.ಕಾಂ ಪದವಿಯನ್ನು ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಶೇ. 60 ಅಂಕಗಳೊಂದಿಗೆ ಹಾಗೂ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಶೇ. 50 ಅಂಕಗಳೊಂದಿಗೆ 2018 ಅಥವಾ ಅದರ ನಂತರ ಪಾಸಾಗಿರಬೇಕು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕರ್ನಾಟಕದವರಾಗಿರಬೇಕು ಮತ್ತು ಉನ್ನತ ಶಿಕ್ಷಣ ಪೂರೈಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್ಎಂಎಸ್/ ಇ ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ ಮತ್ತು ಮಾಸಿಕ ಸ್ಟೈಪಂಡ್ 10,500 ರೂ. ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 8 ರೊಳಗಾಗಿ ಆನ್ಲೈನ್ ನಲ್ಲಿ
www.apprenticeshipindia.org ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ http://bel-india.in ಸಂಪರ್ಕಿಸಬಹುದು.