Bharat jodo yatra | ರಾಷ್ಟ್ರಧ್ವಜ ಹಿಡಿದು ರಾಗಾ ಓಟ
ರಾಯಚೂರು : ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮಾಜಿ ಸೈನಿಕರೊಂದಿಗೆ ರಾಷ್ಟ್ರಧ್ವಜ ಹಿಡಿದು ಸುಮಾರು 100 ಮೀಟರ್ ಗೂ ಹೆಚ್ಚು ದೂರ ಓಡಿದ್ದಾರೆ.
ಈ ವೇಳೆ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಬ್ಯಾಂಡ್ ಬಾರಿಸುತ್ತಾ ಹೆಜ್ಜೆ ಹಾಕಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ರಾಯಚೂರಿನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಬೆಳಗ್ಗೆ 6.10 ಕ್ಕೆ ರಾಯಚೂರು ತಾಲೂಕಿನ ಯರಗೇರಾದಿಂದ ಪಾದಯಾತ್ರೆ ಶುರುವಾಗಿದೆ.
ಪಾದಯಾತ್ರೆ ವೇಳೆ ಮಾಜಿ ಸೈನಿಕರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಈ ವೇಳೆ ಆ ಸೈನಿಕರೊಂದಿಗೆ ರಾಹುಲ್ ಗಾಂಧಿ ರಾಷ್ಟ್ರಧ್ವಜ ಹಿಡಿದು ಸುಮಾರು 100 ಮೀಟರ್ ಗೂ ಹೆಚ್ಚು ದೂರು ಓಡಿದರು.
ಇದಾದ ಬಳಿಕ ಯಾತ್ರೆಯಲ್ಲಿ ಬ್ಯಾಂಡ್ ವಾದ್ಯ ಸಮೇತ ಭಾಗವಹಿಸಿದ ಸೇವಾದಳವನ್ನು ಸೇರಿಕೊಂಡ ಡಿ.ಕೆ.ಶಿವಕುಮಾರ್ ಬ್ಯಾಂಡ್ ಬಾರಿಸುತ್ತಾ ಹೆಜ್ಜೆ ಹಾಕಿದರು.
ಬೃಂದಾವನ ಹೋಟೆಲ್ ನಲ್ಲಿ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದ್ದು, ಹೋಟೆಲ್ ಆವರಣದಲ್ಲಿ ಕೃಷಿ ಕಾರ್ಮಿಕರರೊಂದಿಗೆ ರಾಹುಲ್ ಚರ್ಚೆ ನಡಸಲಿದ್ದಾರೆ.
ಬಳಿಕ ಸಂಜೆ 4 ಗಂಟೆಗೆ ಪುನಃ ಪಾದಯಾತ್ರೆ ಆರಂಭವಾಗಲಿದೆ.








