Bhupinder Singh – ಬಾಲಿವುಡ್ ನ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ನಿಧನ ….
ಭಾರತದ ಖ್ಯಾತ ಗಜಲ್ ಗಾಯಕ, ಬಾಲಿವುಡ್ನಲ್ಲಿ ಹಲವು ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗಿದ್ದ ಭೂಪಿಂದರ್ ಸಿಂಗ್(82) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಭೂಪಿಂದರ್ ಸಿಂಗ್ ಅವರಿಗೆ ಒಂದು ವಾರದ ಹಿಂದೆಯಷ್ಟೇ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ 7.45ರ ಸುಮಾರಿಗೆ ಭೂಪಿಂದರ್ ಸಿಂಗ್ ಸಾವನ್ನಪ್ಪಿದ್ದಾರೆ. ಮಂಗಳವಾರ ಅವರ ಅಂತ್ಯಕ್ರಿಯೆಯನ್ನು ನಡೆಸುವುದಾಗಿ ಪತ್ನಿ ಮಿತಾಲಿ ಸಿಂಗ್ ತಿಳಿಸಿದ್ದಾರೆ.
ಅಮೃತಸರದಲ್ಲಿ ಜನಿಸಿದ ಭೂಪಿಂದರ್ ಸಿಂಗ್ ಬೆಳೆದಿದ್ದು, ದೆಹಲಿಯ ಪಶ್ಚಿಮ ಪಟೇಲ್ ನಗರದಲ್ಲಿ. ಆಲ್ ಇಂಡಿಯಾ ರೇಡಿಯೋ, ದೆಹಲಿ ಮತ್ತು ದೂರದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಗಾಯಕರಾಗಿ ಭೂಪಿಂದರ್ ಸಿಂಗ್ ಅವರ ಪ್ರಸಿದ್ಧ ಹಾಡುಗಳು
ಆನೆ ಸೆ ಉಸ್ಕೆ ಉಕೆ ಆಯೆ ಬಹರ್, ಚಲನಚಿತ್ರ – ಜೀನೆ ಕಿ ರಾಹ್ (1996)
ಕಿಸಿ ನಜರ್ ಕೋ ತೇರಾ ಇಂತೇಜಾರ್ ಆಜ್ ಭಿ ಹೈ, ಚಲನಚಿತ್ರ – ಐತ್ಬಾರ್ (1985)
ತ್ಕಿ ಸಿ ಜಮೀನ್ ಥೋಡಾ ಆಸ್ಮಾನ್, ಚಲನಚಿತ್ರ- ಸಿತಾರಾ (1980)
ಬಿಟಿ ನಾ ಬಿಟೈ ರೈನಾ, ಚಲನಚಿತ್ರ – ಪರಿಚಯ (1972)
ದಿಲ್ ಧೂಂತಾ ಹೈ, ಚಲನಚಿತ್ರ – ಮೌಸಂ (1975)
ನಾಮ್ ಗಮ್ ಜಾಯೇಗಾ, ಚಲನಚಿತ್ರ – ಕಿನಾರಾ (1977)
ಎ ಲೋನ್ಲಿ ಇನ್ ದಿಸ್ ಸಿಟಿ, ಚಲನಚಿತ್ರ – ಘರೌಂಡಾ (1977)
ಹುಜೂರ್, ಹೀಗೆ ಹೋಗಬೇಡ, ಚಿತ್ರ – ಮಾಸೂಮ್ (1983)
ಕರೋಗೆ ಯಾದ್ ತೋ ಹರ್ ಬಾತ್ ಯಾದ್ ಆಯೇಗಿ, ಚಲನಚಿತ್ರ – ಬಜಾರ್ (1982)
ಭೂಪಿಂದರ್ ಸಿಂಗ್ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. Bhupinder Singh – Singer Bhupinder Singh passes away at 82