Bidar | ಅಕ್ಟೊಬರ್ 1 ಮತ್ತು 2 ರಂದು ಕಲ್ಯಾಣ ಪರ್ವ ಕಾರ್ಯಕ್ರಮ
ಬೀದರ್ : ಅಕ್ಟೋಬರ್ 1 ಮತ್ತು 2 ರಂದು ಕಲ್ಯಾಣ ಪರ್ವ ಕಾರ್ಯಕ್ರಮ ನಡೆಯಲಿದೆ ಎಂದು ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜೀ ತಿಳಿಸಿದ್ದಾರೆ.
ಬೀದರ್ ನಗರದ ಬಸವ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚನ್ನಬಸವಾನಂದ ಸ್ವಾಮೀಜಿ, ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಸವ ಧರ್ಮ ಪೀಠದ ಬಸವ ಮಹಾಮನೆ ಆವರಣದಲ್ಲಿ ಕಲ್ಯಾಣ ಪರ್ವ ಕಾರ್ಯಕ್ರಮ ನಡೆಯಲಿದೆ.

ಸಹಸ್ರಾರು ಸಂಖ್ಯೆಯಲ್ಲಿ ರಾಜ್ಯದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕ್ರಮ ದಲ್ಲಿ ಭಾಗಿಯಾಗಲು ಕಲ್ಯಾಣ ಪರ್ವ ಉತ್ಸವ ಸಮಿತಿಯ ಪ್ರಧಾನ ಸಂಘಟಕರಾದ ಚನ್ನಬಸವಾನಂದ ಸ್ವಾಮಿಜೀ ಮನವಿ ಮಾಡಿದ್ದಾರೆ.
ಧಾರವಾಡ, ಕಲಬುರಗಿ, ಬೆಳಗಾವಿ ಚಾಮರಾಜನಗರ ವೈಸೂರ ಮಂಡ್ಯ ಸೇರಿದಂತೆ ರಾಜ್ಯಗಳಿಂದ ಈಗಾಗಲೆ ಪ್ರತಿ ಜಿಲ್ಲೆಯಿಂದ ನಾಲ್ಕು ಸಾವಿರ ಜನರು ರಿಜರವೇಷನ್ ಮಾಡಿದ್ದಾರೆ ಎಂದು ಚನ್ನಬಸವಾನಂದ ಸ್ವಾಮಿಜೀ ಮಾಹಿತಿ ನೀಡಿದ್ದಾರೆ.