ಆಗಸದಲ್ಲಿ ಲೋಹದ ಹಕ್ಕಿಗಳ ಚಿತ್ತಾರ !
ಬೀದರ್ : ನಗರದ ಬಹುಮನಿ ಐತಿಹಾಸಿಕ ಕೋಟೆಯ ತುಂಬೆಲ್ಲ ಜನವೋ ಜನ. ಎಲ್ಲರ ಚಿತ್ತ ನೀಲಿ ಆಕಾಶದತ್ತ.
ಐತಿಹಾಸಿಕ ಕೋಟೆ ಆವರಣದ ಲ್ಲಿ ಶನಿವಾರ ಸಂಜೆ 5ರ ಸುಮಾರಿಗೆ ಜಿಲ್ಲಾಡಳಿತ ಮತ್ತು ವಾಯು ಸೇನಾ ತರಬೇತಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ವಾಯು ಸೂರ್ಯಕಿರಣ ವಿಮಾನಗಳ ಕಸರತ್ತುಗಳನ್ನು ಪ್ರದರ್ಶಿಸಲಾಯಿತು.

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟದ ಚಿತ್ತಾರವನ್ನು ಕಣ್ತುಂಬಿಕೊಳ್ಳಲು 15ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಹಾಗೂ 5 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಜನಸಾಗರವೇ ನೆರೆದಿತ್ತು.
ಸಿಡಿಲಬ್ಬರದ ಶಬ್ದದೊಂದಿಗೆ ಮಿಂಚಿನಂತೆ ಹಾರಾಟವನ್ನು ನಡೆಸುತ್ತಿದ್ದಾಗ ನೆರೆದಿದ್ದ ಸಾರ್ವಜನಿಕರು ಹಾಗೂ ಜನಸಮೂಹದ ಸಂಭ್ರಮ ಮುಗಿಲುಮುಟ್ಟಿತ್ತು.
ಆಕಾಶದಲ್ಲಿ ಮೈನವಿರೇಳಿಸುವ ಒಂದೊಂದು ರೀತಿಯ ಕಸರತ್ತುಗಳು ರೋಮಾಂಚನವಾಗಿತ್ತು..