Bidar | ಅನಾರೋಗ್ಯದಿಂದ ಯೋಧ ಮಹಾದೇವ ಸಾವು
ಬೀದರ್ : ಕಮಲನಗರ ತಾಲೂಕಿನ ಮುರಗ(ಕೆ)ಗ್ರಾಮದ ಬಿ ಎಸ್ ಎಫ್ ಯೋಧ ಮಹಾದೇವ ಜಂಟಿಂಗರಾವ ಕಾಳೇಕರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮೃತ ಯೋಧ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ರಾಣಿನಗರದಲ್ಲಿ 98 ಬಿ ಎನ ಬ್ಯಾಚಿನಲ್ಲಿ ನಾಯಕ ಸುಬೇದಾರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಾಮಾಲೆ ರೋಗದಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಮೃತ ಮಹಾದೇವ ಪಾರ್ಥಿವ ಶರೀರವನ್ನು ಹೈದರಾಬಾದ್ ಮೂಲಕ ಸ್ವ ಗ್ರಾಮ ಮುರುಗ(ಕೆ) ಇಂದು ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.








