ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಮನೆಯ ಖಾಸಗಿ ವಿಚಾರವೊಂದು ಈಗ ಹಾದಿ ಬೀದಿ ರಂಪಾಟವಾಗಿದೆ.
ಇತ್ತೀಚೆಗಷ್ಟೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿಯ ಡಿವೋರ್ಸ್ ಸುದ್ದಿ ಹಬ್ಬಿತ್ತು. ಇದರ ಮಧ್ಯೆ ಈಗ ಬಿಗ್ ಬಿ ಮೊಮ್ಮಗಳು ನವ್ಯಾ ಕುರಿತು ಹೊಸ ಸುದ್ದಿ ಜನರ ಬಾಯಿಗೆ ಬಿದ್ದಿದೆ. ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ನವ್ಯಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವಿಚಾರ ಈಗ ತೀವ್ರ ಚರ್ಚೆ ಪಡೆಯುತ್ತಿದೆ.
ಸ್ಟಾರ್ ನಟಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಮುರಿದು ಬಿದ್ದಿದೆ ಎಂಬ ಸುದ್ದಿಯ ಮಧ್ಯೆ ಸಿದ್ಧಾಂತ್ ಪ್ರೀತಿಗೆ ನವ್ಯಾ (Navya Naveli Nanda) ಗುಡ್ ಬೈ ಹೇಳಿದ್ದಾರೆ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಚಿತ್ರರಂಗದಲ್ಲಿ ಲವ್, ಬ್ರೇಕಪ್, ಡಿವೋರ್ಸ್, ಡೇಟಿಂಗ್ ಎಲ್ಲವೂ ಈಗ ಕಾಮನ್ ಎನ್ನುವಂತಾಗಿ ಬಿಟ್ಟಿದೆ. ಹೀಗಾಗಿ ಈ ಚರ್ಚೆ ಕೂಡ ತೀರಾ ಗಂಭೀರತೆ ಪಡೆದಿಲ್ಲ.
ಕಳೆದ ಎರಡು ವರ್ಷಗಳ ಹಿಂದೆ ಸಿದ್ಧಾಂತ್ ಮತ್ತು ನವ್ಯಾ ಜೊತೆಗೆ ಓಡಾಡುತ್ತಿದ್ದರು. ಈ ಜೋಡಿಯ ನಡುವೆ ಈಗ ಬಿರುಕು ಮೂಡಿದೆ ಎನ್ನಲಾಗಿದೆ. ಬ್ರೇಕಪ್‌ಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇದು ಕೂಡ ಗಾಸಿಪ್ ಸುದ್ದಿ. ನಿಖರವಾದ ಸುದ್ದಿ ಹೊರ ಬಿದ್ದಿಲ್ಲ. ಸಿದ್ಧಾಂತ್ ಮತ್ತು ನವ್ಯಾ ದೂರ ಆಗಿರುವ ವಿಷ್ಯ ಕೇಳಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಇಬ್ಬರೂ ಮತ್ತೆ ಒಂದಾಗಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.