RCBಯಲ್ಲಿ ಬಿಗ್ ಚೇಂಜ್.. ಸ್ಟಾರ್ ಆಟಗಾರ ಔಟ್..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಆಡಿರುವ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಆದ್ರೆ ಸೋತಿರುವ ಎರಡೂ ಪಂದ್ಯಗಳಲ್ಲೂ ಕೊನೆಯವರೆಗೂ ಹೋರಾಟ ನಡೆಸಿ ಸೋತಿದ್ದಾರೆ. ಪಂಜಾಬ್ ವಿರುದ್ಧ ಬೌಲಿಂಗ್ ನಲ್ಲಿ ಮಾಡಿದ ಎಡವಟ್ಟುಗಳಿಂದ ಸೋತರೇ, ಚೆನ್ನೈ ವಿರುದ್ಧದ ಟಾಪ್ ಆರ್ಡರ್ ಬ್ಯಾಟರ್ ಗಳ ಕಳಪೆ ಪ್ರದರ್ಶನದಿಂದ ಪಂದ್ಯ ಸೋಲಬೇಕಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಪಾಠವನ್ನ ಕಲಿಸಿಕೊಟ್ಟಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಆ ತಪ್ಪುಗಳನ್ನು ಮರುಕಳಿಸದೇ ಅಖಾಡಕ್ಕೆ ಧುಮುಕಲಿದೆ.
ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.
ಹೌದು…! ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿರುವ ರಾಯಲ್ ಚಾಲೆಂಜರ್ಸ್ ತಂಡ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಭರ್ಜರಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆತ್ಮ ವಿಶ್ವಾಸದಲ್ಲಿದೆ.
ಈ ಗೆಲುವಿನ ಜೋಷ್ ನಲ್ಲಿಯೇ ಬೆಂಗಳೂರು ಲಯನ್ಸ್ ಗೆ ಡಿಚ್ಚಿ ಹೊಡೆಯಲು ಡೆಲ್ಲಿ ಹುಡುಗರು ಪ್ಲಾನ್ ಮಾಡಿದ್ದಾರೆ. ಅದರಲ್ಲೂ ಡೆಲ್ಲಿ ಬ್ಯಾಟರ್ ಪಂದ್ಯದಿಂದ ಪಂದ್ಯಕ್ಕೆ ಅಬ್ಬರಿಸುತ್ತಿದ್ದಾರೆ. ಇದು ತಂಡದ ಪ್ಲಸ್ ಪಾಯಿಂಟ್ ಆಗಿದೆ.
ಹೀಗಾಗಿ ಬೆಂಗಳೂರು ತಂಡ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಿದೆ. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ.
ಡೆಲ್ಲಿ ಪಂದ್ಯಕ್ಕೆ ಹರ್ಷಲ್ ತಂಡಕ್ಕೆ ವಾಪಸ್ ಆಗುವ ಸಾಧ್ಯತೆಗಳಿರುವುದರಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಮೊಹ್ಮದ್ ಸಿರಾಜ್ ಅವರನ್ನ ಕೈ ಬಿಡುವ ಸಾಧ್ಯತೆಗಳಿವೆ. ಜೊತೆಗೆ ಆಕಾಶ್ ದೀಪ್ ಅವರಿಗೂ ಕೋಕ್ ನೀಡುವ ಸಾಧ್ಯತೆಗಳಿವೆ.
ಕಳೆದ ಐದು ಪಂದ್ಯಗಳಲ್ಲಿ ಸಿರಾಜ್ ಮೂರು ವಿಕೆಟ್ ಗಳನ್ನ ಮಾತ್ರ ಪಡೆದಿದ್ದಾರೆ. ಅವರ ಖದರ್ ಕೂಡ ಕಡಿಮೆಯಾಗಿದೆ. ಹೀಗಾಗಿ ಅವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ಪಂಡಿತರು ಅಂದಾಜಿಸುತ್ತಿದ್ದಾರೆ.
ಸಿರಾಜ್, ಆಕಾಶ್ ತಂಡದಿಂದ ದೂರವಾದ್ರೆ ಹರ್ಷಲ್, ಸಿದ್ದಾರ್ಥ್ ಕೌಲ್ ಅಥವಾ ಚಾಮ ಮಿಲಿಂದ್ ಅವರು ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳಬಹುದು. ಚಾಮ ಮಿಲಿಂಗ್ ಆಡಿದ್ರೆ ಬ್ಯಾಟಿಂಗ್ ನಲ್ಲೂ ತಂಡಕ್ಕೆ ನೆರವಾಗಬಲ್ಲರು. Big change in RCB Star player out









