ಹ್ಯಾಟ್ರಿಕ್ ಗೆಲುವು ದಾಖಲಿಸಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಟೂರ್ನಿಯ 2 ಪಂದ್ಯಗಳನ್ನು ತನ್ನ 2ನೇ ತವರು ಮೈದಾನ ಗುವಾಹಟಿಯಲ್ಲಿ ಆಡಿದ್ದ ರಾಜಸ್ಥಾನ ಮೊದಲ ಬಾರಿ ತವರು ಮೈದಾನ ಜೈಪುರದಲ್ಲಿ ಆಡುತ್ತಿದೆ. ಅತ್ತ ಲಖನೌ ಪಂಜಾಬ್ ವಿರುದ್ಧದ ಸೋಲಿನ ಆಘಾತದಿಂದ ಹೊರಬಂದು ಗೆಲುವಿನ ಲಯಕ್ಕೆ ಮರಳು ನಿರೀಕ್ಷೆಯಲ್ಲಿದೆ.
ರಾಜಸ್ಥಾನ ಇತರೆ ತಂಡಗಳಿಗೆ ಹೋಲಿಸಿದರೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಜೈಸ್ವಾಲ್, ಬಟ್ಲರ್, ಸ್ಯಾಮ್ಸನ್ ಹಾಗೂ ಹೇಟ್ಮಯರ್ಂತಹ ಕಟ್ಟಿಹಾಕುವುದೇ ಎದುರಾಳಿಗೆಳಿಗೆ ಸವಾಲಾಗಿ ಪರಿಣಮಿಸಿದೆ. ರಿಯಾನ್ ಪರಾಗ್, ಸಿಕ್ಕ ಅವಕಾಶ ವನ್ನು ಬಳಸಿಕೊಳ್ಳುತ್ತಿಲ್ಲ. ಹೋಲ್ಡರ್, ಆರ್.ಅಶ್ವಿನ್ ಆಲ್ರೌಂಡರ್ ವಿಭಾಗದಲ್ಲಿ ಬಲ ತುಂಬಿದ್ದಾರೆ.
ಚಾಹಾಲ್,ಜಂಪಾ ಸ್ಪಿನ್ ಅಸ್ತ್ರದ ಮೂಲಕ ಬ್ಯಾಟರ್ಗಳನ್ನು ಪೆವಲಿಯನ್ಗೆ ಅಟ್ಟುತ್ತಿದ್ದಾರೆ. ಲಖನೌ ತಂಡ ಸಂಯೋಜನೆಯಲ್ಲಿ ಉತ್ತಮವಾಗಿದ್ದರೂ ನಿರ್ಣಾಯಕ ಘಟ್ಟದಲ್ಲಿ ಎಡವುತ್ತಿದೆ. ರಾಹುಲ್ ಸ್ಟ್ರೈಕ್ ರೇಟ್ ಕಡೆ ಗಮನ ನೀಡಬೇಕಿದೆ. ಮೇಯರ್ಸ್, ಪೂರಾನ್, ಸ್ಟೋಯ್ನಿಸ್ ಏಕಾಂಗಿಯಾಗಿ ಹೋರಾಡಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ವುಡ್ಸ್, ಬಿಷ್ಣೋಯಿ ಬೌಲಿಂಗ್ ನಲ್ಲಿ ಮಿಂಚಿದರೆ ಗೆಲುವು ಖಚಿತವಾಗಲಿದೆ.








