ದೇಶದ ಪ್ರಮುಖ ಬ್ಯಾಂಕ್ ಗಳು ಸಾಲಗಾರರಿಗೆ ಶಾಕ್ ನೀಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿ, ಐಸಿಐಸಿಐ ಬ್ಯಾಂಕ್ ಗಳು ತಮ್ಮ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ಸ್ ಪರಿಷ್ಕರಿಸುವ ನಿರ್ಧಾರ ಕೈಗೊಂಡಿವೆ.
ಈ ಮೂರು ಬ್ಯಾಂಕ್ ಗಳು ತಮ್ಮ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ಸ್ ಪರಿಷ್ಕರಿಸುವ ನಿರ್ಧಾರ ತೆಗೆದುಕೊಂಡಿವೆ. ಇದು ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರಗಳು ಬ್ಯಾಂಕ್ ನೀಡುವ ಸಾಲದ ಮೇಲೆ ಜಾರಿಗೊಳಿಸುವ ಪ್ರಾಮಾಣಿತ ಬಡ್ಡಿಯಾಗಿದೆ. ಈಗ ದರ ಹೆಚ್ಚಿಸಿದರೆ ವಾಹನ, ವೈಯಕ್ತಿಕ ಹಾಗೂ ಗೃಹ ಸಾಲದಂತಹ ಅದಕ್ಕೆ ಸಂಬಂಧಿಸಿದ ಎಲ್ಲ ಇಎಂಐಗಳನ್ನು ಹೆಚ್ಚಾಗಿ ಪಾವತಿಸಬೇಕಾಗುತ್ತದೆ.








