AIRTEL ಗ್ರಾಹಕರಿಗೆ ಶಾಕ್ : ನಾಳೆಯಿಂದ ದರ ಹೆಚ್ಚಳ..!
AIRTEL ಮತ್ತು JIo ನಡುವೆ ಟಫ್ ಕಾಂಪಿಟೇಷನ್ ಇದ್ದು, ಎರೆಡೂ ಸಂಸ್ಥೆಗಳು ಕೂಡ ಗ್ರಾಹಕರನ್ನ ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನ ಮಾಡ್ತಿವೆ.. ಆದ್ರೆ ಈ ಹೊತ್ತಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಗಳಿಸಿರುವ ಏರ್ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.. ಹೌದು.. ಕಂಪನಿ ಕೆಲ ಪ್ಲಾನ್ ಬೆಲೆಯನ್ನು ದುಬಾರಿಗೊಳಿಸಿದೆ.
ಪ್ರಸ್ತುತ ಏರ್ಟೆಲ್ ನ ಮಾಸಿಕ ಯೋಜನೆಯ ಆರಂಭಿಕ ಬೆಲೆ 49 ರೂಪಾಯಿಗಳಿಂದ ಪ್ರಾರಂಭವಾಗುತ್ತೆ. ಆದ್ರೆ ಇದೀಗ ಬೆಲೆಯನ್ನು ಕಂಪನಿ 79 ರೂಪಾಯಿಗೆ ಏರಿಸಿದೆ. ಜುಲೈ 29ರಿಂದಲೇ ಅಂದ್ರೆ ನಾಳೆಯಿಂದಲೇ ಹೊಸ ದರಗಳು ಜಾರಿಗೆ ಬರಲಿದೆ. ಈಗಾಗಲೇ ಏರ್ಟೆಲ್ 199 ರೂಪಾಯಿ ಮತ್ತು 249 ರೂಪಾಯಿ ಪ್ಲಾನ್ ರದ್ದುಗೊಳಿಸಿದೆ. ಇದೀಗ 49 ರೂಪಾಯಿಯ ಪ್ಲಾನ್ ರದ್ದುಗೊಳಿಸಿ ಗ್ರಾಹಕರಿಸಿ ಸಾಕ್ ನೀಡಿದೆ.
79 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯಲ್ಲಿ 64 ರೂಪಾಯಿಗಳ ಟಾಕ್ ಟೈಮ್ ಲಭ್ಯವಿದೆ. ಈ ಯೋಜನೆಯು 28 ದಿನಗಳ ಬಳಿಕ ಎಕ್ಸ್ ಪೈರ್ ಆಗುತ್ತದೆ. ಬಳಕೆದಾರರಿಗೆ 200 ಎಂಬಿ ಡೇಟಾ ಸಿಗಲಿದೆ. 49 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರಿಗೆ 38 ರೂಪಾಯಿಗಳ ಟಾಕ್ ಟೈಮ್ ಸಿಗ್ತಿತ್ತು. 100 ಎಂಬಿ ಡೇಟಾ ಸಿಗ್ತಿತ್ತು. 28 ದಿನಗಳ ಸಿಂಧುತ್ವವನ್ನು ಇದು ಹೊಂದಿತ್ತು.