ಬಿಗ್ ಬಾಸ್ 8 : ಆರಂಭದಲ್ಲೇ ಮನೆಯಲ್ಲಿ ಫೈಟ್ ಶುರು – ಕ್ಯಾಪ್ಟನ್ ವಿರುದ್ಧ ಸಿಡಿದ ಸಂಬರ್ಗಿ..!
ಬಿಗ್ ಬಾಸ್ ಕನ್ನಡ ಸಿಸನ್ 8 ರಲ್ಲಿ ಗಲಾಟೆ, ಗದ್ದಲ, ಎಲಿಮೇಶನ್ ಗೆ ನಾಮಿನೇಷನ್ , ಟಾಸ್ಕ್ ಗಳಳು ಎಲ್ಲಲವೂ ಶುರುವಾಗಿದೆ. ಇದೇ ರೀತಿ ಆಟಗಾರರನ್ನ ನಾಮಿನೇಟ್ ಮಾಡಲಾಗಿದೆ. ಇತ್ತ ಶೋ ಆರಂಭದಲ್ಲೇ ಗಲಾಟೆಗಳು ಶುರುವಾಗಿದೆ. ಪ್ರಶಾಂತ್ ಸಂಬರ್ಗಿ ಹಾಗೂ ಈ ವಾರದ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ನಡುವೆ ಫೈಟ್ ನಡೆದಿದೆ.
ಬಿಗ್ ಬಾಸ್ 8 : ನಾಮಿನೇಷನ್ ನಿಂದ ಸೇಫ್ ಆಗಿದ್ದು ಹೇಗೆ ಪ್ರಶಾಂತ್ ಸಂಬರ್ಗಿ , ಪಾವಗಡ ಮಂಜು..!
ಆದ್ರೆ ಈ ಗಲಾಟೆಗೆ ನಿಜವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಕೇವಲ ಪ್ರೋಮೋ ಮಾತ್ರವೇ ರಿಲೀಸ್ ಆಗಿದ್ದು, ಪ್ರೋಮೋದಿಂದ ಪ್ರಶಾಂತ್ ಸಂಬರ್ಗಿ ಹಾಗೂ ಬ್ರೋ ಗೌಡ ನಡುವೆ ಗಲಾಟೆ ನಡೆದಿರೋದು ಗೊತ್ತಾಗುತ್ತಿದೆ. ಇಬ್ಬರ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆದಿದ್ದು ಯಾವ ಕಾರಣಕ್ಕೆ ಎನ್ನುವುದು ಇಂದು ರಾತ್ರಿ 9.30 ಗೆ ಗೊತ್ತಾಗಬೇಕಾಗಿದೆ. ಆದ್ರೆ ಸೋಯಿಯಲ್ ಮೀಡಿಯಾಗಳಲ್ಲಿ ಇಬ್ಬರ ಫೈಟ್ ಗಳ ಬಗ್ಗೆ ನಾನಾ ಕಾರಣಗಳ ಬಗ್ಗೆ ನೆಟ್ಟಿಗರು ಚರ್ಚೆ ನಡೆಸಲು ಆರಂಭಿಸಿದ್ದಾರೆ.
ಪ್ರೋಮೋದಲ್ಲಿ ಬ್ರೋ ಗೌಡ ಕ್ಯಾಪ್ಟನ್ ಅನ್ನೋ ದವಲತ್ತಿನಿಂದ ಮಾತನಾಡುತ್ತಿಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ಪ್ರಶಾಂತ್ ಸಂಬರ್ಗಿಯೂ ಸಿಡಿದೆದಿದ್ರೆ, ಇತ್ತ ಮತ್ತೊಂದೆಡೆ ಬ್ರೋ ಗೌಡ ಅವರನ್ನು ಗೀತಾ ಸಮಾಧಾನ ಪಡಿಸಿ ಕರೆದುಕೊಂಡು ಹೋಗ್ತಾರೆ. ಇನ್ನೂ ಇತ್ತೀಚೆಗೆ ಪ್ರಶಾಂತ್ ಸಂಬರ್ಗಿ ನಟಿ ದಿವ್ಯಾ ಉರುಡುಗ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿರೋದಕ್ಕೆ ಇವರಿಬ್ಬರ ನಡುವಿನ ಕನೆಕ್ಷನ್ ಗೆ ಬ್ರೋ ಗೌಡ ಆಪೋಸ್ ಮಾಡ್ತಿದ್ದಾರಾ.. ಇದಕ್ಕೆ ಪ್ರಸಾಂತ್ ಸಿಡಿದೆದ್ರಾ ಎಂದೆಲ್ಲಾ ಸಾಮಾಜಿಕ ಜಾಲಾತಣಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಇವೆಲ್ಲಾ ಗಾಸಿಪ್ ಗಳಿಗೆ ಇಂದು ರಾತ್ರಿ ತೆರೆಬೀಳಲಿದೆ.