ಬಿಗ್ ಬಾಸ್ ಕನ್ನಡ ಸೀಸನ್ 8 ಗೆ ಕೌಂಟ್ ಡೌನ್ ಸ್ಟಾರ್ಟ್..! ಯಾರೆಲ್ಲಾ ದೊಡ್ಮನೆ ಪ್ರವೇಶಿಸಬಹುದು..!
ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ಇನ್ನೇನು ಕೇವಲ 4 ದಿನಗಳಷ್ಟೇ ಬಾಕಿಯಿದ್ದು, ಕೌಂಟ್ ಡೌನ್ ಶುರುವಾಗಿದೆ. ಇತ್ತ ಬಿಗ್ ಬಾಸ್ ಪ್ರೋಮೋ ಸಹ ಹರಿದಾಡುತ್ತಿದೆ. ಕನ್ನಡದ ಬಿಗ್ಬಾಸ್ ಸೀಸನ್ 8 ಫೆಬ್ರವರಿ 28ರಂದು ಆರಂಭವಾಗಲಿದೆ. ಯಾರ್ಯಾರು ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ಸೀಸನ್ ಹೇಗಿರಲಿದೆ ಅನ್ನೋ ಕುತೂಹಲ ಜನರಲ್ಲಿ ಮನೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನ ಈ ಸೀಸನ್ ನ ಪೂರ್ವತಯಾರಿಗಳು ಭರ್ಜರಿಯಾಗಿ ಸಾಗುತ್ತಿದೆ. ಪ್ರೋಮೋಗಳು ಬಿಡುಗಡೆಯಾಗಿದೆ.
ಹಿರಿಯ ನಟ ಜಗ್ಗೇಶ್ ಗೆ ಅವಮಾನ : ಒಳ್ಳೆ ಹುಡುಗ ಪ್ರಥಮ್ ಆಕ್ರೋಶ..!
ಇನ್ನೂ ಈ ಸೀಸನ್ ನಲ್ಲಿ ಯಾರೆಲ್ಲಾ ದೊಡ್ಮನೆಗೆ ಎಂಟ್ರಿ ಕೊಡಬಹುದು ಎಂಬ ಕುತೂಹಲವಿದ್ದು, ಕೆಲವರ ಹೆಸರುಗಳು ಕೇಳಿಬರುತ್ತಿವೆ.
ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ , ಕಾಮಿಡಿ ಕಿಲಾಡಿ ನಯನಾ ಬಿಗ್ ಬಾಸ್ ನಯನಾ, ನಿರ್ದೇಶಕ ರವಿ ಶ್ರೀವತ್ಸ, ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್, ಕಿರಣ್ ಶ್ರೀನಿವಾಸ್, ಸುನಿಲ್ ರಾವ್, ತಬಲಾ ನಾಣಿ, ತರಂಗ ವಿಶ್ವ, ಮೂರುಗಂಟು ಧಾರಾವಾಹಿಯ ಸಮೀಕ್ಷಾ, ಅಗ್ನಿಸಾಕ್ಷಿಯ ಸುಕೃತಾ, ಅಮೃತವರ್ಷಿಣಿಯ ರಜಿನಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ರಘು ವೈನ್ ಸ್ಟೋರ್ನ ರಘು ಗೌಡ, ಹೀಗೆ ಹಲವರ ಹೆಸರುಗಳು ಕೇಳಿಬರುತ್ತಿದ್ದು, ಫೆಬ್ರವರಿ 28 ರ ಗ್ರ್ಯಾಂಡ್ ಓಪನಿಂಗ್ ದಿನವೇ ಎಲ್ಲಾ ಊಹಾಪೋಹಗಳಿಗೆ ತೆರೆಬೀಳಲಿದೆ.