ಬಿಗ್ ಬಾಸ್ 8 : ನಿರ್ಮಲಾ ಮನೆ ಮಂದಿ ಎಲ್ಲರಿಂದಲೂ ಡಿಸ್ ಲೈಕ್ ಆದ್ರೂ ಆ ಒಬ್ಬ ಸ್ಪರ್ಧಿ ಮಾತ್ರವೇ ಲೈಕ್ ಮಾಡಿದ್ರು..!
ಬಿಗ್ ಬಾಸ್ ಮನೆಯಲ್ಲಿ 5 ದಿನ ಸ್ಪರ್ಧಿಗಳೆಲ್ಲಾ ನಿರ್ಮಲಾರನ್ನೇ ಟಾರ್ಗೆಟ್ ಮಾಡಿದ್ರೂ ದಿವ್ಯಾ ಸುರೇಶ್ ಮಾತ್ರವೇ ಆಕೆಯ ಪರ ನಿಂತು ಗಮನ ಸೆಳೆದಿದ್ದಾರೆ. ಹೌದು 5ನೇ ದಿನ ಬಿಗ್ ಬಾಸ್ ಸ್ಪರ್ಧಿಗಳಿಗೆ ಇಷ್ಟವಾದವರಿಗೆ ಲೈಕ್ ಬ್ಯಾಡ್ಜ್ ಮತ್ತು ಇಷ್ಟ ಆಗದವರಿಗೆ ಡಿಸ್ಲೈಕ್ ಬ್ಯಾಡ್ಜ್ ಹಾಕುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ನಿರ್ಮಲಾ ಚೆನ್ನಪ್ಪ ಅತಿ ಹೆಚ್ಚು ಡಿಸ್ಲೈಕ್ ಬ್ಯಾಡ್ಜ್ ಪಡೆದುಕೊಂಡರು. ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಮಂದಿ ನಿರ್ಮಲಾ ಅವರಿಗೆ ಡಿಸ್ಲೈಕ್ ಬ್ಯಾಡ್ಜ್ ನೀಡಿದರು. ಇದಕ್ಕೆ ನಿರ್ಮಲಾ ಅವರು ಮನೆಯಲ್ಲಿ ಪ್ರತ್ಯೇಕತೆಯನ್ನು ಹುಡುಕುತ್ತಿದ್ದಾರೆ. ಮನೆ ಸದಸ್ಯರಿಂದ ದೂರವಾಗುತ್ತಿದ್ದಾರೆ, ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಿದ್ದಾರೆ ಎಂದು ಕಾರಣ ನೀಡಿದರು.
ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!
ಹೌದು ಗೀತಾ ಭಟ್, ಮಂಜು, ಪ್ರಶಾಂತ್ ಸಂಬರ್ಗಿ, ಚಂದ್ರಕಲಾ ಮೋಹನ್, ವೈಷ್ಣವಿ ಗೌಡ, ಅರವಿಂದ್ , ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಅವರು ನಿರ್ಮಲಾ ಅವರಿಗೆ ಡಿಸ್ಲೈಕ್ ಬ್ಯಾಡ್ಜ್ ನೀಡಿದರು. ಆದ್ರೆ ದಿವ್ಯಾ ಸುರೇಶ್ ಅವರೊಬ್ಬರು ಮಾತ್ರ ನಿರ್ಮಲಾಗೆ ಲೈಕ್ ಬ್ಯಾಡ್ಜ್ ನೀಡಿದರು. ಅಲ್ಲದೇ ಇತರೇ ಎಲ್ಲಾ ಸ್ಪರ್ಧಿಗಳಿಗಿಂತ ದಿವ್ಯಾ ಕೊಟ್ಟ ಉತ್ತರ ಬಹಳ ವಿಭಿನ್ನವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಅವರು ತಾವು ತಾವಾಗಿಯೇ ಇದ್ದಾರೆ. ನಾಟಕೀಯವಾಗಿಲ್ಲ ಎಂಬ ಅರ್ಥದಲ್ಲಿತ್ತು.
ಬಿಗ್ ಬಾಸ್ ನಿಂದ ನೇರವಾಗಿ ನಾಮಿನೇಟ್ ಆದ್ರೂ ಸೇಫ್ ಆದ್ರೂ ನಿರ್ಮಲಾ…!








