ಬಿಗ್ ಬಾಸ್ ನಲ್ಲಿ ಪಂಚರಂಗಿ ನಟಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ..!

1 min read

ಬಿಗ್ ಬಾಸ್ ನಲ್ಲಿ ಪಂಚರಂಗಿ ನಟಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ..!

ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ ಮನೆಗೆ 7ನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ನಟಿ ನಿಧಿ ಸುಬ್ಬಯ್ಯ ಹಿನ್ನೆಲೆ ಏನು..?

ಧಾರವಾಡದ ಹುಡುಗ ವಿಶ್ವನಾಥ್ ಹಾವೇರಿ ಬಿಗ್ ಬಾಸ್ ಮನೆಯ ಅತಿ ಕಿರಿಯ ಸದಸ್ಯ..!

ಸಾಮಾನ್ಯವಾಗಿ ಎಲ್ಲರಿಗೂ ನಿಧಿ ಸುಬ್ಬಯ್ಯ ಅವರು ಗೊತ್ತೇ ಇದ್ದಾರೆ. ಕನ್ನಡದಲ್ಲಿ ಪಂಚರಂಗಿ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಿಧಿ ಸುಬ್ಬಯ್ಯ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದವರು. ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ತಮ್ಮ ಗ್ಲಾಮರಸ್ ಲುಕ್ಸ್ ನಿಂದಲೇ ಹುಡುಗರ ಹಾರ್ಟ್ ಗೆ ಕೊಳ್ಳಿ ಇಡ್ತಾರೆ. ಅಂದ್ಹಾಗೆ ನಟನಾ ಜೊತೆಗೆ ನಿಧಿ ರೂಪದರ್ಶಿ ಕೂಡ ಹೌದು. ಮೂಲತಃ ಕೊಡಗಿನವರಾಗಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ನಿಧಿ ಅಭಿಮಾನಿ, ಚಮ್ಕಾಯಿಸಿ ಚಿಂದಿ ಉಡಾಯಿಸಿ, ವೀರಬಾಹು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸ್ವೀಟ್ ಹಾರ್ಟ್ ಎಂಬ ತೆಲುಗು ಸಿನಿಮಾ, ಓಹ್ ಮೈ ಗಾಡ್ ಎಂಬ ಹಿಂದಿ ಸಿನಿಮಾದಲ್ಲು ಬಣ್ಣ ಹಚ್ಚಿದ್ದಾರೆ. ಸ್ವಲ್ಪ ದಿನಗಳಿಂದ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ನಿಧಿ ಇದೀಗ ಬಿಗ್ ಬಾಸ್ ಗೆ ಬಲಗಾಲಿಸಿರಿದ್ದು, ಅದೃಷ್ಟ ಖುಲಾಯಿಸುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟ ಬೈಕ್ ರೇಸರ್ ಅರವಿಂದ್

ಬಿಗ್ ಬಾಸ್ ನಲ್ಲಿ ಮೋಡಿ ಮಾಡ್ತಾರಾ ಅಗ್ನಿಸಾಕ್ಷಿಯ ಚೆಂದುಳ್ಳಿ ಚೆಲುವೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd